

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲ ದಿನಗಳಿಂದ ಸುರಿದ ಗಾಳಿ- ಮಳೆಗೆ ವಿವಿಧೆಡೆ ವಿದ್ಯುತ್ ಕಂಬಗಳು, ಪರಿವರ್ತಕಗಳು ಹಾಗೂ ಲೈನ್‌ಗಳು ಹಾನಿಗೊಳಗಾಗಿದ್ದು, ಇದರಿಂದ ಹೆಸ್ಕಾಂಗೆ ಅಂದಾಜು 15.09 ಕೋಟಿ ರೂಪಾಯಿ ನಷ್ಟವಾಗಿದೆ.
ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಹಾಗೂ ಹಾವೇರಿಯಲ್ಲಿ ಏ. 1ರಿಂದ 27ರವರೆಗೆ ಸುರಿದ ಮಳೆಯಿಂದ ಹಾನಿಯಾಗಿದೆ.
7 ಜಿಲ್ಲೆಗಳಲ್ಲಿ 3,505 ವಿದ್ಯುತ್ ಕಂಬಗಳು ಧರೆಗುರುಳಿದ್ದು, 2,794 ಕಂಬಗಳನ್ನು ಮರು ಸ್ಥಾಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 228, ಗದಗ 36, ಹಾವೇರಿ 329, ಉತ್ತರ ಕನ್ನಡ 1710, ಬೆಳಗಾವಿ 189, ವಿಜಯಪುರ 596, ಬಾಗಲಕೋಟೆ 417 ಕಂಬಗಳು ಹಾನಿಯಾಗಿವೆ. ಜೋರು ಗಾಳಿ- ಮಳೆ¬ಂದಾಗಿ 151 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿದ್ದು, 145 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ಧಾರವಾಡ 6, ಗದಗ 3, ಹಾವೇರಿ 36, ಉತ್ತರ ಕನ್ನಡ 82, ಬೆಳಗಾವಿ 17 ಹಾಗೂ ವಿಜಯಪುರ ಜಿಲ್ಲೆಯಲ್ಲಿ 4 ಟಿಸಿಗಳು ಹಾನಿಗೀಡಾಗಿವೆ. 16 ಕಿ.ಮೀ. ವಿದ್ಯುತ್ ಲೈನ್ ಹಾಳಾಗಿದ್ದು, 15 ಕಿ.ಮೀ. ಮಾರ್ಗವನ್ನು ಮರುಸ್ಥಾಪಿಸಲಾಗಿದೆ. ಮಾರ್ಚ್.ನಲ್ಲಿ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ 1,121 ಕಂಬಗಳು, 122 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿದ್ದು, ಅಂದಾಜು 2.76 ಕೋಟಿ ರೂ. ನಷ್ಟವಾಗಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.