

ಕುಂದಗೋಳ: ಪಟ್ಟಣದ ಟಿವಿಎಸ್ ಶೋರೂಂನಿಂದ ತಹಸೀಲ್ದಾರ್ ಕಚೇರಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಶಿಥಿಲಗೊಂಡಿದ್ದ ವಿದ್ಯುತ್ ಕಂಬವನ್ನು ಹೆಸ್ಕಾಂ ಸಿಬ್ಬಂದಿ ಬುಧವಾರ ಬದಲಿಸಿದರು. ತಳಭಾಗದಲ್ಲಿ ಶಿಥಿಲಗೊಂಡಿದ್ದ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿತ್ತು. ಕ್ರೇನ್ ಬಳಸಿ ಹೆಸ್ಕಾಂ ಸಿಬ್ಬಂದಿ ಹಳೇ ಕಂಬ ತೆರವುಗೊಳಿಸಿದರು. ನಂತರ ಹೊಸ ಕಂಬ ಅಳವಡಿಸಿದರು. ವಿಜಯವಾಣಿ ಆ. 23ರಂದು ‘ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.