ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

3
ಸಮರ್ಪಕ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಚನ್ನಮ್ಮನ ಕಿತ್ತೂರಿನ ಹೆಸ್ಕಾಂ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಬಿಷ್ಠಪ್ಪ ಶಿಂಧೆ, ಮಹಾಂತೇಶ ಎಮ್ಮಿ, ವಿಜಯಕುಮಾರ ಶಿಂಧೆ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು: ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.

ಚನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಭಾಗದ 9 ಹಳ್ಳಿಗಳಿಗೆ ಒಂದು ತಿಂಗಳಿನಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇಲ್ಲಿಯ ಜನರಿಗೆ ಕುಡಿಯಲು ಸಹ ನೀರು ಸಿಗುತ್ತಿಲ್ಲ. ವಿದ್ಯುತ್ ಇಲ್ಲದೆ ಕೃಷಿಗೆ ಸಾಕಷ್ಟು ತೊಂದರೆ ಆಗುತ್ತದೆ. ಶಾಲಾ ಮಕ್ಕಳು ಕತ್ತಲಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಹೆಸ್ಕಾಂ ಅಧಿಕಾರಿಗಳೇ ಕಾರಣ ಎಂದು ರೈತರು ದೂರಿದರು. ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಒಳಜಗಳದಿಂದಾಗಿ ಹೀಗಾಗುತ್ತಿದ್ದು, ಕೂಡಲೆ ವಿದ್ಯುತ್ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಬಿಷ್ಠಪ್ಪ ಶಿಂಧೆ, ಗ್ರಾಪಂ ಸದಸ್ಯ ಮಹಾಂತೇಶ ಎಮ್ಮಿ, ಮುಖಂಡರಾದ ವಿಜಯಕುಮಾರ ಶಿಂಧೆ ಸೇರಿ ರೈತರು, ಯುವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net