ಮಳೆಗಾಲದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಮುಂಜಾಗೃತೆ ವಹಿಸಿ-ಸತೀಶ ಸೈಲ್‌

HESCOM
Published on

ಕಾರವಾರ: ಮಳೆಗಾಲ ಆರಂಭವಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿವೆ ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಅಧ್ಯಕ್ಷರು ಹಾಗೂ ಶಾಸಕ ಸತೀಶ್ ಸೈಲ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಗುರುವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಹೆಸ್ಕಾಂ ಅವಹಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ವಿದ್ಯುತ್ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೇ ಕರೆಗಳು ಸ್ವೀಕರಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಶಾಸಕರು ಎಂತಹ ಸಂದರ್ಭದಲ್ಲೂ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಸ್ಥಿರ ದೂರವಾಣಿ ಸಂಖ್ಯೆಯ ಜೊತೆ ಶೀಘ್ರವೇ ಮೊಬೈಲ್ ಹೆಲ್ಪ್ಲೈನ್ ತರೆಯಲು ಹಾಗೂ ಕಾರವಾರದಲ್ಲಿ ಅಗತ್ಯವಿರುವ ಗ್ಯಾಂಗ್‌ಮನ್ ಗಳನ್ನು ನಿಯೋಸುವಂತೆ ಹೆಸ್ಕಾಂ ಹಿರಿಯ ಅಧಿಕಾರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಮಳೆಗಾಲದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ರಂಬೆ ಕೊಂಬೆಗಳು ಬೀಳುವುದರಿಂದ ತಾಲೂಕಿನ ಶಿರವಾಡ, ಅಮದಳ್ಳಿ, ಸದಾಶಿವಗಡ, ಕೆ.ಎಚ್.ಬಿ ಕಾಲೋನಿ ಸೇರಿದಂತೆ ಕಾರವಾರ ತಾಲೂಕಿನಲ್ಲಿ ಗಿಡ ಮರ ಕಂಟಿAಗ್ ಆಗದೇ ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಅನಾಹುತ ಸಂಭವಿಸು ಸಾಧ್ಯತೆಯಿರುವುದರಿಂದ ಕೂಡಲೇ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳು ತಮ್ಮ ವ್ಯಾಪ್ತಿಯ ಹಾಗೂ ನಗರಸಭೆ ವ್ಯಾಪ್ತಿಯ ಗಿಡ ಮರಗಳ ಖುದ್ದು ಕಂಟಿAಗ್ ಮಾಡಿಸಬೇಕು. ಮರಗಳನ್ನು ತೆರವುಗೊಳಿಸಲು ಅಥವಾ ಮರಗಳನ್ನು ಕಟಿಂಗ್ ಮಾಡಿಸಲು ತಮ್ಮ ವ್ಯಾಪ್ತಿಯ

ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಅರಣ್ಯ ಇಲಾಖೆಗೆ ಗ್ರಾಮ ಪಂಚಾಯತಗಳಿAದ ಬರುವ ಮಾಹಿತಿಯಂತೆ ಅನುಮತಿ ನೀಡುವಂತೆ ಅರಣ್ಯ ಆಧಿಕಾರಿ ತಿಳಿಸಿದ ಅವರು ವಿದ್ಯುತ್

ತಂತಿ ಅಡ್ಡಿಯಾಗಿರುವ ಮರ ಗಿಡಗಳ ಕಟಿಂಗ್ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ಹೆಸ್ಕಾಂ ಅಧಿಕಾರಿಗೆ ಅಗತ್ಯ ಸಹಕಾರ ನೀಡುವಂತೆ

ಸೂಚನೆ ನೀಡಿದರು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ ಮಾತನಾಡಿ, ಕಳೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ

ಬೇಳೂರನಲ್ಲಿ 6 ವಿದ್ಯುತ್ ಹೊಸ ಕಂಬಗಳನ್ನು ಅಳವಡಿಸಿ ಎಂದು ತಿಳಿಸಿದ್ದರೂ ಸಹ ಇದುವರೆಗೆ ಯಾವುದೇ ರೀತಿಯ ಕೆಲಸ ಮಾಡಿಲ್ಲ ಹೊಸ

ಕಂಬಗಳನ್ನು ಹಾಕದೇ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಹಶೀಲ್ದಾರ ನಿಶ್ಚಲ್ ನರೋನಾ, ತಾಲೂಕು ಪಂಚಾಯತ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಣಗೌಡರ , ನಗರ ಸಭೆಯ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ಹೆಸ್ಕಾಂ ಅಧಿಕಾರಿ ರೋಶನಿ ಪೆಡ್ನೇಕರ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net