ಹುಬ್ಬಳ್ಳಿ: ಇಲ್ಲಿನ ವಿವಿಧ ಹೆಸ್ಕಾಂ ಕಚೇರಿಗಳಲ್ಲಿ ಮಾ. 15ರಂದು ಬೆಳಗ್ಗೆ 11ಕ್ಕೆ ಸಹಾಯಕ ಕಾರ್ಯನಿರ್ವಾಕ ಅಭಿಯಂತರರ ಅಧ್ಯಕ್ಷತೆಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.
ಕೇಶ್ವಾಪುರದ ಶಿವಗಂಗಾ ಬಡಾವಣೆಯ ಹೆಸ್ಕಾಂ ಕಚೇರಿ, ಪಿಎಚ್ ಕಾಂಪೌಂಡ್ ನ ತಬೀಬ್ ಲ್ಯಾಂಡ್ ಹೆಸ್ಕಾಂ ಕಚೇರಿ, ಗೋಕುಲ ರಸ್ತೆಯ ಉದ್ಯಮ ನಗರದ ಹೆಸ್ಕಾಂ ಕಚೇರಿ ಹಾಗೂ ನವನಗರದ ಉಪ- ವಿಭಾಗದ ಕಚೇರಿಗಳಲ್ಲಿ ಸಭೆಗಳು ನಡೆಯಲಿವೆ.
ಗ್ರಾಹಕರು ಪಾಲ್ಗೊಂಡು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.
ಗ್ರಾಮೀಣ ಭಾಗದಲ್ಲಿ:
ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ ಹಾಗೂ ನವಲಗುಂದ ಉಪವಿಭಾಗದ ಕಚೇರಿಗಳಲ್ಲಿ ಮಾ. 15ರಂದು ಬೆಳಗ್ಗೆ 11ಕ್ಕೆ ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ವಿಭಾಗ ವ್ಯಾಪ್ತಿಯ ಅಂಚಟಗೇರಿ, ಬ್ಯಾಹಟ್ಟಿ, ನೂಲ್ವಿ, ಶಿರಗುಪ್ಪಿ, ನವಲಗುಂದ ಉಪವಿಭಾಗದ ನವಲಗುಂದ ಪಟ್ಟಣ, ನವಲಗುಂದ ಗ್ರಾಮೀಣ, ಅಣ್ಣಿಗೇರಿ ಪಟ್ಟಣ ಹಾಗೂ ಅಣ್ಣಿಗೇರಿ ಗ್ರಾಮೀಣ, ಕುಂದಗೋಳ ಉಪವಿಭಾಗದ ಕುಂದಗೋಳ, ಸಂಶಿ ಹಾಗೂ ಗುಡಗೇರಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಬಹುದು ಎಂದು ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣಕುಮಾರ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.