ಹೆಸರುಕಾಳು ಖರೀದಿ ಕೇಂದ್ರ ಆರಂಭ ; ಸೆ.13ರಿಂದ ನೋಂದಣಿ ; ನಾಲ್ಕು ತಾಲೂಕುಗಳಲ್ಲಿ 5 ಕೇಂದ್ರ

hesarukalu
Published on

ತುಮಕೂರು : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಒಂದು ಕ್ವಿಂಟಾಲ್‌ಗೆ 7275 ರೂ. ದರದಲ್ಲಿ ಗುಣಮಟ್ಟದ ‘ಹೆಸರುಕಾಳು’ ಖರೀದಿಸಲು 4 ತಾಲೂಕುಗಳಲ್ಲಿ 5 ಖರೀದಿ ಕೇಂದ್ರ ಶೀಘ್ರದಲ್ಲಿಯೇ ಆರಂಭವಾಗಲಿವೆ.

ಕುಣಿಗಲ್, ತಿಪಟೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ತುರುವೇಕೆರೆಯಲ್ಲಿ ಕೇಂದ್ರಗಳು ಪ್ರಾರಂಭವಾಗಲಿದ್ದು, ಪ್ರಸಕ್ತ ಸಾಲಿನಲ್ಲಿಯೇ ಜಿಲ್ಲೆಯಲ್ಲಿ 8831 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಯ ಗುರಿ ಇಟ್ಟುಕೊಳ್ಳಲಾಗಿದೆ. ಹೆಸರುಕಾಳು ಹೆಚ್ಚು ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಗೆ ಅನುಗುಣವಾಗಿ ಕೇಂದ್ರ ಆರಂಭಿಸಲಾಗುತ್ತಿದೆ.

ಕೇಂದ್ರಗಳ ಆರಂಭ ಪೂರ್ವ ಸಿದ್ಧತಾ ಪ್ರಕ್ರಿಯೆಯು ನಡೆಯುತ್ತಿದ್ದು ಸೆ.12ರೊಳಗಾಗಿ ಪ್ರಾರಂಭಗೊಳ್ಳಲಿವೆ. ರೈತರು ಖರೀದಿ ಕೇಂದ್ರಗಳಲ್ಲಿ ಹೆಸರುಕಾಳು ವಾರಾಟ ವಾಡಲು ಸೆ.13 ರಿಂದ 27ರವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸೆ.29 ರಿಂದ ಹೆಸರುಕಾಳು ಖರೀದಿಯೊಂದಿಗೆ ನೋಂದಣಿಯೂ ನಡೆಯಲಿದೆ.

5 ಕೇಂದ್ರಗಳಲ್ಲಿ ಎನ್‌ಐಸಿ ಸಂಸ್ಥೆಯು ಈಗಾಗಲೇ ರಾಗಿ, ಭತ್ತದ ಬೆಳೆಗೆ ಅಭಿವೃದ್ಧಿಪಡಿಸಿರುವ ಫ್ರೂಟ್ ತಂತ್ರಾಂಶದೊಂದಿಗೆ ಸಂಯೋಜಿಸಿ ಹೆಸರುಕಾಳು ಖರೀದಿಗೆ ಸಂಬಂಧಿಸಿದ ವಾಹಿತಿ ಪಡೆಯಲಾಗಿದ್ದು ನಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ವಾಹಿತಿ ಒದಗಿಸಬೇಕಿದೆ. ಹೆಸರುಕಾಳು ಖರೀದಿ ಪ್ರಕ್ರಿಯೆಯಲ್ಲಿ ್ರೂಟ್ ದತ್ತಾಂಶದಲ್ಲಿ ನೋಂದಣಿ ಕೈಗೊಳ್ಳಲು ರೈತರು ಆಧಾರ್ ಕಾರ್ಡ್ ಸಲ್ಲಿಸಿ, ಕೇಂದ್ರದಿಂದ ನೀಡುವ ಎಫ್‌ಐಡಿ ಸಂಖ್ಯೆಯನ್ನು ಮೂಲ ಆಧಾರ್ ಕಾರ್ಡ್‌ನೊಂದಿಗೆ ಖರೀದಿ ಕೇಂದ್ರಕ್ಕೆ ಸಲ್ಲಿಸಿ ನೋಂದಣಿ ವಾಡಿಕೊಳ್ಳಬಹುದು. ನಿಗದಿಪಡಿಸಿದ ದಿನಾಂಕದೊಳಗೆ ಹೆಸರುಕಾಳು ಒಣಗಿಸಿ, ಸ್ವಚ್ಛಗೊಳಿಸಿ 50 ಕೆ.ಜಿ.ಯ ಗೋಣಿ ಚೀಲದಲ್ಲಿ ತುಂಬಿ ಗುಣಮಟ್ಟದ ಕಾಳನ್ನು ಕೇಂದ್ರಕ್ಕೆ ತರಬೇಕು.

ಹೆಸರುಕಾಳು ಬೆಂಬಲ ಬೆಲೆ ಯೋಜನೆಯಡಿ ರೈತರು ನೋಂದಣಿ ವಾಡಿದ ನಂತರ ಕಾಳಿನ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ತೇವಾಂಶ, ಕಲ್ಮಷಗಳು, ಇತ್ಯಾದಿ ಗುಣಧರ್ಮಗಳ ವಾನದಂಡಗಳಂತೆ ಪರಿಶೀಲಿಸಲಾಗುವುದು. ಹೆಸರುಕಾಳು ಖರೀದಿ ಹಣವು ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜವಾ ಆಗಲಿದೆ.

ಹೆಸರುಕಾಳು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು ಸಾಕಷ್ಟು ಕಡೆ ಉತ್ತಮ ಬೆಳೆ ಕೂಡ ಬಂದಿದೆ, ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಬೆಂಬಲ ಬೆಲೆಯಲ್ಲಿ ಕೊಂಡುಕೊಳ್ಳಲು ಸರ್ಕಾರ ಮುಂದಾಗಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕ್ವಿಂಟಾಲ್‌ಗೆ 7275 ರೂಪಾಯಿ ಲಭ್ಯವಾಗಲಿದೆ. ಕರೊನಾ ನಿಯಮ ಪಾಲಿಸಿ ಮಾರಾಟ ಮಾಡಬೇಕು. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net