ಹೆಸಗಲ್ ಗ್ರಾಮಸಭೆ ಬಹಿಷ್ಕಾರ

MDG2 (5)
Published on

ಮೂಡಿಗೆರೆ: ಹೆಸಗಲ್ ಗ್ರಾಪಂ ಗ್ರಾಮಸಭೆಗೆ 9 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಾಗಿ ಉಳಿದ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಒಗಟ್ಟು ಪ್ರದರ್ಶಿಸಿ ಗ್ರಾಮಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರು.

ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು, ನಿವೇಶನದಂತಹ ಗಂಭೀರ ಸಮಸ್ಯೆಗಳಿವೆ. ಜೆಜೆಎಂ ಕಾಮಗಾರಿ ಕೇವಲ ಬಿಲ್ ಮಾಡಿಕೊಳ್ಳಲು ಕಾಟಾಚಾರಕ್ಕೆ ಮಾಡಲಾಗಿದೆ. ಕೆಲವೆಡೆ ನೀರಿನ ಟ್ಯಾಂಕ್ ಕೂಡ ನಿರ್ಮಿಸದೆ ಪ್ರತಿ ಮನೆಗೆ ನಲ್ಲಿ ಅಳವಡಿಸಿರುವುದು ಬಿಟ್ಟರೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ನಿವೇಶನಕ್ಕಾಗಿ 10 ವರ್ಷದಿಂದ ನಿರಂತರವಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿವೇಶನ ನೀಡಲು ಜಾಗ ಕಾಯ್ದಿರಿಸುವ ಬಗ್ಗೆ ಪ್ರಶ್ನೆ ಮಾಡಲು ಕಂದಾಯ ಅಧಿಕಾರಿಗಳು ಕೂಡ ಸಭೆಗೆ ಹಾಜರಾಗಿಲ್ಲ.

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಗ್ರಾಮಸಭೆ ಅವಶ್ಯಕತೆ ಇಲ್ಲವೆಂದು ಸಭೆಯಲ್ಲಿದ್ದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು. ಸದಸ್ಯರು ಮತ್ತು ಗ್ರಾಮಸ್ಥರ ಒಮ್ಮತದ ತೀರ್ಮಾನಕ್ಕೆ ಗಲಿಬಿಲಿಗೊಂಡ ಗ್ರಾಪಂ ಅಧಿಕಾರಿಗಳು ಗ್ರಾಮಸಭೆಯನ್ನು ರದ್ದುಪಡಿಸಿದರು.

ಗ್ರಾಪಂ ಅಧ್ಯಕ್ಷೆ ನಲ್ಮಾ ಬೇಗಂ, ಸದಸ್ಯರಾದ ಪ್ರಶಾಂತ್, ಶಿವಣ್ಣ, ರಾಧಾ, ಅಖಿಲಾ ಕೃಷ್ಣ, ಅರವಿಂದ್, ಕಲೀಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net