ನಾಡಿನ ವೀರಮಾತೆ ಚನ್ನಮ್ಮ

Heroine Channamma of the country
ತೇರದಾಳ ಪಟ್ಟಣದ ಹಿಡಕಲ್ ರಸ್ತೆಯಲ್ಲಿರುವ ವೃತ್ತದಲ್ಲಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಡಾ. ಮಹಾಂತ್ರಪ್ರಭು ಶ್ರೀ, ಗಂಗಾಧರದೇವರು, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಇತರರಿದ್ದರು.
Published on

ತೇರದಾಳ: ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಈ ನಾಡಿನ ಅಪ್ರತಿಮ ಹೋರಾಟಗಾರ್ತಿ. ಪ್ರತಿಯೊಬ್ಬ ಮಹಿಳೆ ಸಾಧನೆಗೆ ಚನ್ನಮ್ಮ ವ್ಯಕ್ತಿತ್ವ ಆದರ್ಶ ಎಂದು ಬೆಳಗಾವಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಹೇಳಿದರು.

ಚನ್ನಮ್ಮ ಜಯಂತಿ ನಿಮಿತ್ತ ಇಲ್ಲಿನ ಹಿಡಕಲ್ ರಸ್ತೆಯಲ್ಲಿನ ಚನ್ನಮ್ಮ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಮಾಜ ನನಗೆ ಏನು ಮಾಡಿದೆ ಎನ್ನುವ ಬದಲು ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ನಾವು ಅರಿಯಬೇಕು. ಮಹಿಳೆಯರು ಬರೀ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡದೆ ಮಕ್ಕಳಿಗೆ ಸಾಧಕರ, ಹೋರಾಟಗಾರರ ಕುರಿತು ಮನಮುಟ್ಟುವಂತೆ ಹೇಳಬೇಕೆಂದು ತಿಳಿಸಿದರು. ಹಿರೇಮಠದ ಗಂಗಾಧರ ದೇವರು ಮಾತನಾಡಿದರು.

ಪಂಚಮಸಾಲಿ ಸಮಾಜದ ಪ್ರತಿಭೆಗಳಾದ ಡಾ. ತೃಪ್ತಿ ಉಪ್ಪಿನ, ಶಿಲ್ಪಾ ಬಸವರಾಜ ನಾಗನೂರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಎಸ್.ಬಿ. ಕಾಂಬಳೆ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ಹಿರಿಯರಾದ ಮಲ್ಲಪ್ಪ ಜಮಖಂಡಿ, ಅಲ್ಲಪ್ಪ ಮದಲಮಟ್ಟಿ, ಈಶ್ವರ ಯಲ್ಲಟ್ಟಿ, ಈಶ್ವರ ಯಲ್ಲಟ್ಟಿ, ರೇವನೇಶ ಮುಕುಂದ, ಎಂ.ಸಿ. ಕುಂಚನೂರ, ಬಸವರಾಜ ಕಾಲತಿಪ್ಪಿ, ಚನ್ನಪ್ಪ ಚೌಗಲಾ, ಮುತ್ತಪ್ಪ ಮುಳ್ಳಟ್ಟಿ, ಆನಂದ ಉಪ್ಪಿನ, ಮಹಾದೇವ ಯಲ್ಲಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net