

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಸುಭಾಷ್ಚಂದ್ರ ಬೋಸ್ ಜಯಂತಿ ನಿಮಿತ್ತ ವೀರ ಪರಾಕ್ರಮ ದಿನವನ್ನು ಗುರುವಾರ ಆಚರಿಸಲಾಯಿತು.
ಶಾಲೆ ಶಿಕ್ಷಕಿ ರಶ್ಮಿ ಮಾತನಾಡಿ, ದೇಶದ ಮಹಾನ್ ವ್ಯಕ್ತಿಯಾದ ನೇತಾಜಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದವರು. ಇಂತಹ ಮಹಾನ್ ನಾಯಕರ ಆದರ್ಶ, ವ್ಯಕ್ತಿತ್ವವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದ ಅವರು, ನೇತಾಜಿ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು.
ಶಾಲೆಯ ಕರೆಸ್ಪಾಂಡೆಂಟ್ ಗುರುರಾಜ ಅಗಡಿ, ಶಿಕ್ಷಕರು, ಇತರರು ಇದ್ದರು.