ಹಾರೋಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವೀರಾಗ್ರಣಿ

sports
Published on

ಮುಂಡರಗಿ: ತಾಲೂಕಿನ ಹಾರೋಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಹಿರೇವಡ್ಡಟ್ಟಿ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಹಿರೇವಡ್ಡಟ್ಟಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.

ಬಾಲಕರ ಗುಂಪು ಆಟಗಳ ವಿಭಾಗದಲ್ಲಿ ಖೋಖೋ (ಪ್ರಥಮ), ಕಬಡ್ಡಿ (ದ್ವಿತೀಯ), ಥ್ರೋ ಬಾಲ್ (ದ್ವಿತೀಯ). ಬಾಲಕಿಯರ ಗುಂಪು ಆಟಗಳ ವಿಭಾಗದಲ್ಲಿ ಕಬಡ್ಡಿ (ಪ್ರಥಮ), ರಿಲೇ (ಪ್ರಥಮ), ಥ್ರೋ ಬಾಲ್ (ಪ್ರಥಮ), ಖೋಖೋ (ದ್ವಿತೀಯ), ವಾಲಿಬಾಲ್ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ: ಪೂರ್ಣಿಮಾ ಕಿನ್ನಾಳ 200 ಮೀಟರ್ ಓಟದಲ್ಲಿ (ಪ್ರಥಮ), ಉದ್ದ ಜಿಗಿತ (ಪ್ರಥಮ), ಕಾವೇರಿ ಕಿನ್ನಾಳ 100 ಮೀಟರ್ ಓಟದಲ್ಲಿ (ಪ್ರಥಮ), 200 ಮೀಟರ್ ಓಟದಲ್ಲಿ (ದ್ವಿತೀಯ), ಅನ್ನಪೂರ್ಣಾ ಓಲಿ ಎತ್ತರ ಜಿಗಿತದಲ್ಲಿ (ದ್ವಿತೀಯ), ಉದ್ದ ಜಿಗಿತದಲ್ಲಿ (ದ್ವಿತೀಯ), 80 ಮೀಟರ್ ಹರ್ಡಲ್ಸ್‌ನಲ್ಲಿ (ತೃತೀಯ), ನಾಗರತ್ನ ಕುರಿ ಗುಂಡು ಎಸೆತದಲ್ಲಿ (ದ್ವಿತೀಯ), ಪ್ರೀತಿ ಕಣವಿ 400 ಮೀಟರ್ ಓಟದಲ್ಲಿ (ತೃತೀಯ), ಕಾವೇರಿ ಹಡಪದ 100 ಮೀಟರ್ ಓಟದಲ್ಲಿ (ತೃತೀಯ) ಶ್ರೇಯಾ ಕಿನ್ನಾಳ 600 ಮೀಟರ್ ಓಟದಲ್ಲಿ (ತೃತೀಯ), ರಾಜಭಕ್ಷಿ ಗರಡಿಮನಿ ಎತ್ತರ ಜಿಗಿತದಲ್ಲಿ (ತೃತೀಯ), ರಫೀಕ್ ಸೊಂಡೂರ ಉದ್ದ ಜಿಗಿತದಲ್ಲಿ (ತೃತೀಯ), 400 ಮೀಟರ್ ಓಟದಲ್ಲಿ (ತೃತೀಯ), ನಿಂಗರಾಜ ಕಳಸಣ್ಣನವರ 600 ಮೀಟರ್ ಓಟದಲ್ಲಿ (ದ್ವಿತೀಯ), ಕೃಷ್ಣ ಬಾರಕೇರ 80 ಮೀಟರ್ ಹರ್ಡಲ್ಸ್ ಓಟದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net