ಸತ್ಯ-ಅಹಿಂಸೆಯ ಮಾರ್ಗ ತೋರಿದ ಮಹಾವೀರರು: ಶಾಸಕ ಕೆ.ಹರೀಶ್ ಗೌಡ ಬಣ್ಣನೆ

16
Published on

ಜೈನ ಧರ್ಮದ ಕೊನೆಯ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.

ನಗರದ ದಿವಾನ್ಸ್ ರಸ್ತೆಯ ಜೈನ್ಸ್ ಅಪಾರ್ಟ್ಮೆಂಟ್‌ನಲ್ಲಿ ಗುರುವಾರ ಮೈಸೂರು ಯುವ ಬಳಗದ ವತಿಯಿಂದ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ. ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ಅಭಿಪ್ರಾಯಪಟ್ಟರು.

ಪ್ರಮುಖರಾದ ಹಂಸರಾಜ್ ಜೈನ್, ಕಾಂತಿಲಾಲ್ ಜೈನ್, ಗೌತಮ್ ಸಾಲೇಚ, ರಮೇಶ್ ಕಂಡೆ ವಾಲ್, ಪ್ರಕಾಶ್ ಜೈನ್, ಕಾಂತಿಲಾಲ್ ದಾದಾಲ್, ಶರವಣ್, ಗೌತಮ್ ಬಾಲಾಜಿ, ರವಿಚಂದ್ರ, ನವೀನ್, ಪ್ರಮೋದ್ ಗೌಡ, ಲೋಕೇಶ್, ಹೇಮಂತ್, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net