ಕೊಟ್ಟಿಗೆಯಲ್ಲಿದ್ದ 40 ಸಾವಿರ ರೂ. ಮೌಲ್ಯದ 8 ಕುರಿ ಕಳ್ಳತನ

maxresdefault
Published on

ಹಾನಗಲ್ಲ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 40 ಸಾವಿರ ರೂ. ಮೌಲ್ಯದ 8 ಕುರಿಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಹೀರೂರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಇರ್ಷಾದಹ್ಮದ್​ ಚಮನಸಾಬ ಶಿಡೇನೂರ (52) ಎಂಬುವರ ಕುರಿಗಳು ಕಳ್ಳತನ ಆಗಿರುವುದು.

ಇವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಗಳನ್ನು ರಾತ್ರಿ ಸಮಯದಲ್ಲಿ ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net