ಗೊಜನೂರಿನ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

13 LXR-4
ಲಕ್ಷ್ಮೇಶ್ವರ ತಾಲೂಕಿನ ಗೊಜನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಗ್ರೂಪ್ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Published on

ಲಕ್ಷ್ಮೇಶ್ವರ: ಮಾಗಡಿ ಗ್ರೂಪ್ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಗೊಜನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಶಾಲೆಯ ವಿದ್ಯಾರ್ಥಿ ಹರ್ಷ ಜಾಲರಡ್ಡಿ 100 ಮೀ, 200 ಮೀ. ಓಟದಲ್ಲಿ ಪ್ರಥಮ, ಪ್ರದೀಪ ಅಳವಂಡಿ ಗುಂಡು ಎಸೆತ. ಜಾವೆಲಿನ್‌ಎಸೆತ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ. ಸತ್ತರಸಾಬ್ ಹಣಗಿ 100 ಮೀ ಮತ್ತು 200 ಮೀ, ಅಡತಡೆ ಓಟದಲ್ಲಿ ದ್ವಿತೀಯ ಸ್ಥಾನ. 400 ಮೀ.ಓಟದಲ್ಲಿ ವಿನಾಯಕ ಸೂರಣಗಿ ಪ್ರಥಮ, ಪ್ರದೀಪ ಹೊನಕೇರಿ ಜಾವೆಲಿನ್ ಎಸೆತದಲ್ಲಿ ದ್ವಿತೀಯ, ಪ್ರವೀಣಗೌಡ ಗೌಡರ ಉದ್ದ ಜಿಗಿತ, ಅಡತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗ: ವೈಷ್ಣವಿ ಸಂಜೀವಣ್ಣವರ 100 ಮೀ., 200 ಮೀ. ಮತ್ತು 1500 ಮೀ. ಓಟದಲ್ಲಿ ಪ್ರಥಮ ಸ್ಥಾನ. ಸಹನಾ ಕರಕಣ್ಣವರ 400 ಮೀ. ಓಟದಲ್ಲಿ ಪ್ರಥಮ ಮತ್ತು ಮಾನ್ಯಾ ಮಾಳಗಿಮನಿ ದ್ವಿತೀಯ ಸ್ಥಾನ, ವಿದ್ಯಾ ಬಾರ್ಕೇರ 3000 ಮೀ.ನಲ್ಲಿ ಪ್ರಥಮ ಸ್ಥಾನ, ಸಹನಾ ಚಿಂಚಲಿ ಉದ್ದ ಜಿಗಿತ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರದೀಪ ಅಳವಂಡಿ ಮತ್ತು ಪ್ರವೀಣಗೌಡ ಗೌಡರ ಹಾಗೂ ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಸಂಜೀವಣ್ಣವರ ವೈಯಕ್ತಿಕ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಮುರಾರ್ಜಿ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿದೆ. ಪ್ರಾಚಾರ್ಯ ಎನ್.ಕೆ. ಹತ್ತಿಕಾಳ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಕೆ.ಪಿ. ಪಾಟೀಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net