ರೈತ ಮಹಿಳೆ ಸಂಕಷ್ಟಕ್ಕೆ ಸಿಕ್ತು ಪರಿಹಾರ

CTD ERULLI 30
Published on

ಹಿರಿಯೂರು: ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ರೈತ ಮಹಿಳೆ ವಸಂತಕುಮಾರಿ ಅವರ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಮಾರಾಟ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಲಾಕ್‌ಡೌನ್ ಸಂಕಷ್ಟದಲ್ಲಿದ್ದ ಈರುಳ್ಳಿ ಬೆಳೆಗಾರರ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನ ಸೆಳೆದಿದ್ದ ರೈತ ಮಹಿಳೆ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಗುರುವಾರ ಖರೀದಿದಾರರ ಮೂಲಕ ಈರುಳ್ಳಿ ಮಾರಾಟ ಮಾಡಿದ್ದಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ಪಟ್ಟಣದ ವರ್ತಕರು ಗುರುವಾರ ಗ್ರಾಮಕ್ಕೆ ಆಗಮಿಸಿ ಒಂದು ಚೀಲ ಈರುಳ್ಳಿಗೆ 600 ರೂ. ನಿಗದಿಪಡಿಸಿ ಒಟ್ಟು 180 ಚೀಲ ಈರುಳ್ಳಿ ಖರೀದಿಸಿ ಬ್ರಹ್ಮಾವರಕ್ಕೆ ಕೊಂಡೊಯ್ದಿದ್ದಾರೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ ತಿಳಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಗೋವಿಂದರಾಜ್, ಜಯಂತ್, ಬ್ರಹ್ಮಾವರದ ವರ್ತಕರಾದ ಚೈತನ್ಯ, ಸುರೇಶ್ ಇದ್ದರು.

ಕಾಟನಾಯಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ಹೇಳಿಕೆ: ಬಯಲು ಸೀಮೆಯ ಕುಗ್ರಾಮದ ನನ್ನ ಸಂಕಷ್ಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತಪರ ಕಾಳಜಿ ಇರುವ ನಾಯಕ, ನಿಜವಾದ ಮಣ್ಣಿನ ಮಗ ಎಂಬುದನ್ನು ಸಾಬೀತು ಮಾಡಿದ್ದಾರೆ. ಸಿಎಂ ಸಹಾಯ ಹಸ್ತದಿಂದ ಮಹಿಳಾ ಕೃಷಿಕರಿಗೆ ಸ್ಫೂರ್ತಿ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net