ಶಾಸಕ ಜಮೀರ್ ಹೇಳಿಕೆಗೆ ಖಂಡನೆ

Keshavamurthy Hiriyur
Published on

ಹಿರಿಯೂರು: ಬೆಂಗಳೂರಿನ ಪಾದರಾಯನಪುರ ಗಲಭೆಕೋರರನ್ನು ಬೆಂಬಲಿಸಿ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ದೂರಿದ್ದಾರೆ.

ತಕ್ಷಣ ಜಮೀರ್ ಅವರನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕರೊನಾ ಶಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ತೆರಳಿದ್ದ ಆರೋಗ್ಯ-ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಸ್ಥಳೀಯ ಪುಂಡರು ದಾಳಿ ನಡೆಸಿರುವುದು ಅಮಾನವೀಯ ಕೃತ್ಯ. ರಾಜ್ಯ ಸರ್ಕಾರ ಸಾಫ್ಟ್ ಕಾರ್ನರ್ ನೀತಿಯಿಂದ ಹೊರ ಬಂದು ಉತ್ತರ ಪ್ರದೇಶ ಸರ್ಕಾರದ ರೀತಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net