

ಹಿರಿಯೂರು: ತಾಲೂಕಿನ ಕೆ.ಆರ್.ಹಳ್ಳಿ ಸಮೀಪದ ಬೈನರಿ ಗಾರ್ಮೆಂಟ್ಸ್‌ಗೆ ಶುಕ್ರವಾರ ಜವಳಿ ಸಚಿವ ಶ್ರೀಮಂತ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.
ಕಾರ್ಮಿಕರ ಸುರಕ್ಷತೆ, ಉತ್ಪಾದನೆ, ಮೂಲ ಸೌಕರ್ಯ ಹಾಗೂ ಜವಳಿ ಉದ್ಯಮ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
ಜಿಪಂ ಸದಸ್ಯೆ ರಾಜೇಶ್ವರಿ, ಶಾಸಕರ ಆಪ್ತ ಸಹಾಯಕ ನಿರಂಜನ್, ಬಿಜೆಪಿ ಮಖಂಡರಾದ ಗಂಗಾಧರ್, ಹರೀಶ್, ಕಬಡ್ಡಿ ಶ್ರೀನಿವಾಸ್, ಚಿರಂಜೀವಿ ಇತರರಿದ್ದರು.