ಶೋಷಿತರ ಪ್ರಗತಿಗೆ ಶಿಕ್ಷಣವೆ ಅಸ್ತ್ರ

HYR sevalal 15
Published on

ಹಿರಿಯೂರು: ಸಮಾಜದಲ್ಲಿ ಶೋಷಿತರಾಗಿ ತಳಮಟ್ಟದಲ್ಲಿರುವ ಲಂಬಾಣಿ ಸೇರಿ ವಿವಿಧ ಸಮುದಾಯಗಳು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ರಬಲು ಶಿಕ್ಷಣವೆ ಪ್ರಮುಖ ಮಾರ್ಗ ಎಂದು ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಲಂಬಾಣಿ ಸಮುದಾಯಕ್ಕೆ ಸೇವಾಲಾಲ್ ಕೊಡುಗೆ ಅಪಾರ ಎಂದರು.

ಪ್ರಾಚಾರ್ಯ ಡಾ.ಧರಣೇಂದ್ರಯ್ಯ ಮಾತನಾಡಿ, ಲಂಬಾಣಿ ಸಮುದಾಯ ದೇಶದಲ್ಲೇ ತನ್ನದೇ ಆದ ವಿಶೇಷ ಸಂಸ್ಕೃತಿ ಹೊಂದಿದ್ದು, ತನ್ನ ಶ್ರಮಶಕ್ತಿಯ ಮೂಲಕ ದೇಶದ ಪ್ರಗತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯ ಓಂಕಾರಪ್ಪ, ಮಹೇಶ್ ನಾಯ್ಕ, ರಮೇಶ್‌ನಾಯ್ಕ, ಕಸಾಪ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ನಗಸರಭೆ ಸದಸ್ಯರಾದ ದಾದಾಪೀರ್, ಅಂಬಿಕಾ ಅರಾಧ್ಯ, ಈರಲಿಂಗೇಗೌಡ, ಮುಖಂಡರಾದ ನಾಗರಾಜನಾಯ್ಕ, ರವಿಚಂದ್ರನಾಯ್ಕ, ಎನ್.ಚಂದ್ರನಾಯ್ಕ, ಭಾನುಪ್ರಕಾಶ್, ಸಿದ್ದೇಶನಾಯ್ಕ, ತಹಸೀಲ್ದಾರ್ ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net