![HYR HANNU 10]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F04%2FHYR-HANNU-10.jpg?w=480&auto=format%2Ccompress&fit=max)
![HYR HANNU 10]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F04%2FHYR-HANNU-10.jpg?w=480&auto=format%2Ccompress&fit=max)
ಹಿರಿಯೂರು: ತೋಟಗಾರಿಕೆ ಇಲಾಖೆ-ವಾಣಿ ವಿಲಾಸ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು-ಹಂಪಲು ಮಾರಾಟಕ್ಕೆ ಕ್ರಮಕೈಗೊಂಡಿದೆ.
ಸಂಚಾರಿ ವಾಹನಕ್ಕೆ ಶುಕ್ರವಾರ ತಹಸೀಲ್ದಾರ್ ಸತ್ಯನಾರಾಯಣ ಚಾಲನೆ ನೀಡಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಳೆ, ಪಪ್ಪಾಯ, ಕಲ್ಲಂಗಡಿ, ದಾಳಿಂಬೆ ಇತರೆ ಹಣ್ಣುಗಳನ್ನು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತೋಟಗಾರಿಕೆ ಇಲಾಖೆ ಧಾವಿಸಿದೆ.
ಅನ್ನದಾತರ ಹಿತ ಕಾಯುವ ಉದ್ದೇಶದಿಂದ ಕೃಷಿ ಉತ್ಪನ್ನಗಳ ಸಾಗಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ಹಣ್ಣು-ತರಕಾರಿ ಮಾರಾಟ ಮಾಡಲು ಕಡಿಮೆ ಸಮಯ ನಿಗದಿ ಪಡಿಸಿದ್ದರಿಂದ ರೈತರಿಂದ ಖರೀದಿಸಿದ ಹಣ್ಣುಗಳನ್ನು ಮಾರಾಟ ಮಾಡಲು ಖರೀದಿದಾರರಿಗೆ ಸಾಧ್ಯವಾಗದೇ, ಹಣ್ಣುಗಳ ಕಟಾವಿಗೆ ಹಿಂದೇಟು ಹಾಕಿದ್ದರು.
ಈ ಸಮಸ್ಯೆ ಅರಿತು ತೋಟಗಾರಿಕೆ ಇಲಾಖೆಯು, ವಾಣಿ ವಿಲಾಸ ತೋಟಗಾರಿಕೆ ಹಾಗೂ ರೈತ ಉತ್ಪಾದಕ ಕಂಪನಿ ಜತೆಗೂಡಿ ಹಣ್ಣು ಮಾರಾಟ ಸಂಚಾರಿ ವಾಹನಕ್ಕೆ ಚಾಲನೆ ನೀಡಿದೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ನಿರಂಜನಮೂರ್ತಿ, ಚಿರಂಜೀವಿ, ರಘು, ಕಬಡ್ಡಿ ಶ್ರೀನಿವಾಸ್, ಹರೀಶ್, ನಿತ್ಯಾನಂದ, ರಘು, ನಗರಸಭೆ ಸದಸ್ಯ ಮಹೇಶ್ ಪಲ್ಲವ ಇತರರಿದ್ದರು.