ಇಂದು ಬನಶಂಕರಿ ದೇವಿ ರಥೋತ್ಸವ

HYR Bhanashankari Devi 08
Published on

ಹಿರಿಯೂರು: ಇಲ್ಲಿನ ಶ್ರೀ ಬನಶಂಕರಿ ದೇವಿ ರಥೋತ್ಸವ ಫೆ.9ರ ಮಧ್ಯಾಹ್ನ 12ಕ್ಕೆ ಜರುಗಲಿದೆ. ಜಾತ್ರೆ ಅಂಗವಾಗಿ ಧ್ವಜಾರೋಹಣ, ಗಂಗಾಪೂಜೆ, ಅಂಕುರಾರ್ಪಣೆ, ಅಭಿಷೇಕ, ಬಲಿಹರಣ, ಗಣಪತಿ ಹೋಮ, ಕಲ್ಯಾಣೋತ್ಸವ ಸೇವೆ ನಡೆಯಲಿವೆ.

ಫೆ.10ರ ಬೆಳಗ್ಗೆ 8ಕ್ಕೆ ಶ್ರೀಮಾತೆಗೆ ಪಂಚಾಮೃತ ಅಭಿಷೇಕ ನಂತರ ವಸಂತೋತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net