ಪರಂಪರೆ ಉಳಿವಿಗೆ ಜೀವನ ಮುಡಿಪು

19 KNK 01
ಕನಕಗಿರಿ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಿಸಲಾಯಿತು. ಸಮಾಜದ ಮುಖಂಡರಾದ ಹನುಮಂತಪ್ಪ ರಾಟಿ, ರಾಘವೇಂದ್ರ ಮರಾಠಿ, ಶರಣಪ್ಪ ಚವ್ಹಾಣ, ಶಂಕರ ಹೂಗಾರ, ನಾಗರಾಜ ಮರಾಠಿ, ರವಿಕುಮಾರ ಎಂ, ವಸಂತಕುಮಾರ ಆರೇರ್ ಇತರರಿದ್ದರು.
Published on

ಕನಕಗಿರಿ: ಹಿಂದು ಸಂಸ್ಕೃತಿ, ಪರಂಪರೆಗೆ ಶಿವಾಜಿ ಕೊಡುಗೆ ಅನನ್ಯವಾಗಿದೆ ಎಂದು ಮರಾಠ ಸಮಾಜದ ತಾಲೂಕು ಅಧ್ಯಕ್ಷ ಅಂಬಣ್ಣ ಹೂಗಾರ ಹೇಳಿದರು.

ಇಲ್ಲಿನ ಶಿವಾಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿಯಲ್ಲಿ ಬುಧವಾರ ಮಾತನಾಡಿದರು.

ತಾಯಿ ಜೀಜಾಬಾಯಿ ಅವರ ಪುತ್ರನಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯ ಸಂಸ್ಕೃತಿ, ಪರಂಪರೆ ಉಳಿವಿಗೆ ತಮ್ಮ ಜೀವನವನ್ನೇ ಪಣಕ್ಕಿಟ್ಟಿದ್ದರು. ಶಿವಾಜಿಯಂಥಹ ಅಪ್ರತಿಮ ಹೋರಾಟಗಾರರ ಆದರ್ಶಗಳನ್ನು ಇಂದಿನ ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದರು.

ಪಟ್ಟಣದ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು. ಸಮಾಜದ ಮುಖಂಡರಾದ ಹನುಮಂತಪ್ಪ ರಾಟಿ, ರಾಘವೇಂದ್ರ ಮರಾಠಿ, ಶರಣಪ್ಪ ಚವ್ಹಾಣ, ಶಂಕರ ಹೂಗಾರ, ನಾಗರಾಜ ಮರಾಠಿ, ರವಿಕುಮಾರ ಎಂ, ವಸಂತಕುಮಾರ ಆರೇರ್, ವೀರ ಶಿವಾಜಿ ಸೇನೆ, ಹಾಗೂ ರಾಷ್ಟ್ರಮಾತಾ ಜೀಜಾಬಾಯಿ ಮಹಿಳಾ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net