ಜಾತ್ರಾ ಮಹೋತ್ಸವಗಳಿಂದ ಪರಂಪರೆ ಜೀವಂತ

IMG20251003172536.jpg
Published on

ಧಾರವಾಡ: ಜಾತ್ರಾ ಮಹೋತ್ಸವಗಳಿಂದ ನಮ್ಮ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಜೀವಂತವಾಗಿಡಲು ಸಹಕಾರಿಯಾಗಲಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಹೇಳಿದರು.

ಕುಮಾರೇಶ್ವರ ನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಜನರು ಬಹಳಷ್ಟು ಶ್ರದ್ಧೆ-ಭಕ್ತಿಯಿಂದ ಪಾಲ್ಗೊಂಡು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿ ಎಂದರು.

ಜಾತ್ರಾ ಮಹೋತ್ಸವಗಳಿಂದ ನಾವು ಸಾಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಮಾತನಾಡಿ, 13 ವರ್ಷಗಳಿಂದ ದೇವಸ್ಥಾನ ನಿರ್ವಹಣಾ ಸಂಘವು ಉದಯೋನ್ಮುಖ ಕಲಾವಿದರಿಗೆ ಸುಸಜ್ಜಿತ ವೇದಿಕೆ ಕಲ್ಪಿಸಿಕೊಡುತ್ತ ಭಾರತೀಯ ಕಲೆ, ಸಂಸ್ಕೃತಿ ಬೆಳವಣಿಗೆಗೆ ಪೂರಕವಾಗಿರುವುದು ಅಭಿನಂದನಾರ್ಹವಾದುದು ಎಂದರು.

ಶ್ರೀ ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಪ್ರೊ.ಜಿ.ಎನ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜೆ.ವೈ.ತೋಟದ, ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ಉದಯ ನಾಯಕ್, ಪುಷ್ಪಾವತಿ ಚೌವ್ಹಾಣ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಜಿ.ಎಂ.ಹುಲ್ಲೂರ, ಪ್ರೊ.ಎಂ.ಈಶ್ವರಯ್ಯ, ಬಿ.ಎ.ಹಿರೇಮಠ, ಅನ್ನಪ್ಪ ಗೋಪನ್ನವರ, ಐ.ಎಸ್.ಚನ್ನಾಳ, ಎನ್.ಬಿ.ಪಾಟೀಲ, ಸಚಿನ ಉಂಡಾಳೆ, ಬಿ.ಎನ್.ಪಾಟೀಲ, ಶ್ರೀಕಾಂತ ಹಲಗತ್ತಿ, ಎಸ್.ಎಸ್.ಹೊಳೆಯಣ್ಣವರ, ಎಂ.ಎಸ್.ರಾಣೆ, ರಾಜು ಚಂದನಕರ, ಎನ್.ಜಿ.ಅಮೋಗಿಮಠ, ಪ್ರದೀಪ ಜಾಧವ, ನಿತೀಶ್ ಗಾಸ್ತೆ, ಆತ್ಮಾನಂದ ಕಬ್ಬೂರ, ಗುರುರಾಜ ಅಕ್ಕಿ ಇದ್ದರು. ಶಂಕರ ಗಸ್ತಿ ನಿರೂಪಿಸಿದರು. ಪ್ರಭು ಹಿರೇಮಠ ಸ್ವಾಗತಿಸಿದರು. ನಂದಾ ಗುಳೇದಗುಡ್ಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net