

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವು ಸಿಬ್ಬಂದಿಗೆ ಗಾಯಗಳಾಗಿವೆ. ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಟ್ಟಿಗೆ, ಟಾರ್, ಸೇರಿದಂತೆ ಪ್ರತಿಯೊಂದು ವಸ್ತುಗಳ ಕ್ವಾಲಿಟಿ ಚೆಕ್ ಮಾಡುವ ಗುಣನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿ ಇದಾಗಿದೆ. ಚೀಫ್ ಎಂಜನೀಯರ್ ಶಿವ ಕುಮಾರ್ ಹಾಗೂ ತಂಡ ಕಾಮಗಾರಿಗಳ ಕ್ವಾಲಿಟಿ ಚೆಕ್ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಬೆಂಕಿ ಹತ್ತಿ ಕೊಂಡಿ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಲ್ಯಾಬ್‌ನಲ್ಲಿ ಬೆನ್ಸೆನ್ ಎನ್ನುವ ಕೆಮಿಕಲ್ ಬ್ಲಾಸ್ಟ್ ಆಗಿರೋದು ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಬೆನ್ಸೆನ್ ಎನ್ನುವ ಕೆಮಿನಲ್ ಅನ್ನು ಬಿಟುಮಿನ್ ಟೆಸ್ಟ್ ಬಳಸಲಾಗುತ್ತದೆ. ಬೆನ್ಸೆನ್ ಕೆಮಿಕೆಲ್ ಗೆ ಸ್ಪಾರ್ಕ್ ಆಗಿ ಗುಣನಿಯಂತ್ರಣ ಘಟಕದಲ್ಲಿ ಸ್ಫೋಟವಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಅರ್ಧ ಗಂಟೆಯಾದರೂ ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿಲ್ಲ. ನಂತರ ತಡವಾಗಿ ಬಂದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.
ಅಗ್ನಿ ಅವಘಡದಲ್ಲಿ ಏಳು ಜನ ಇಂಜಿನಿಯರ್ಸ್ಗೆ ಬೆಂಕಿ ತಗುಲಿ ಗಾಯಗಳಾಗಿವೆ. ಈ ಪೈಕಿ 5 ಜನ ಪುರುಷರು ಇಬ್ಬರು ಮಹಿಳಾ ಇಂಜಿನಿಯರ್ಸ್ ಆಗಿದ್ದಾರೆ. ಗಾಯಾಗೊಂಡ ನೌಕರನಿಗೆ ಸೆಂಟ್ ಮಾರ್ಥಾಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಕ್ಟೋರಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.