ಬಿಬಿಎಂಪಿ ಬಜೆಟ್​: ವಿವಿಧ ಇಲಾಖೆಗೆ ಹಂಚಿಕೆಯಾಗಿರುವ ಅನುದಾನ ಸೇರಿ ಬಜೆಟ್​ನ ಪ್ರಮುಖಾಂಶಗಳು​ ಇಲ್ಲಿವೆ…

BBMP Budget
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಚುನಾಯಿತ ಸದಸ್ಯರು ಇಲ್ಲದ ಕಾರಣ ಸತತ ಮೂರನೇ ವರ್ಷವೂ ಅಧಿಕಾರಿಗಳಿಂದಲೇ ಬಜೆಟ್ ಮಂಡನೆಯಾಗಿದೆ. 2023-24ನೇ ಸಾಲಿನ ಆಯವ್ಯಯವನ್ನು ಪುರಭವನದಲ್ಲಿ ಗುರುವಾರ (ಮಾ. 2) ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಮಂಡಿಸಿದರು.

ಒಟ್ಟು ಅಂದಾಜು 11,157 ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡನೆಯಾಗಿದೆ. ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ವಿವರ ಸೇರಿದಂತೆ ಸಂಪೂರ್ಣ ಬಿಬಿಎಂಪಿ ಬಜೆಟ್​ನ ಪ್ರಮುಖಾಂಶಗಳು ಈ ಕೆಳಕಂಡತಿವೆ.

* ಕಟ್ಟಡ ನಕ್ಷೆಗಳ ಡಿಜಟಲೀಕರಣ ರೂ.2 ಕೋಟಿಗಳು * ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ಒಟ್ಟು ರೂ.8 ಕೋಟಿಗಳು * ಅನಧಿಕೃತ ಕಟ್ಟಡ ತೆರವುಗೊಳಿಸಲು ಒಟ್ಟು ರೂ.10 ಕೋಟಿಗಳು * ಕಸಾಯಿಖಾನೆಗಳ ನಿರ್ವಹಣೆಗಾಗಿ ರೂ.1 ಕೋಟಿಗಳು * ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗಾಗಿ ರೂ.7.74 ಕೋಟಿಗಳು * ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ ರೂ.60.10 ಕೋಟಿಗಳು * ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ ರೂ.23.11 ಕೋಟಿಗಳು * ವಾಡ್ ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು: 1. ಪ್ರತಿ ವಾರ್ಡ್​ಗೆ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು 2. ಪ್ರತಿ ವಾರ್ಡ್​ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು 3. ಪ್ರತಿ ವಾರ್ಡ್​ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು 4. ಮಾನ್ಸುನ್ ನಿರ್ವಹಣೆಗಾಗಿ ರೂ.5 ಲಕ್ಷಗಳು. * ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿಗಳು * ತುರ್ತು ಮಾನ್ಸುನ್ ಕಾಮಗಾರಿಗಳಿಗಾಗಿ ರೂ.15 ಕೋಟಿಗಳು: 1. ಹೊಸ ವಲಯಗಳಿಗೆ ರೂ.2 ಕೋಟಿ 2. ಹಳೆ ವಲಯಗಳಿಗೆ ರೂ.1 ಕೋಟಿ * ಬೀದಿ ದೀಪಗಳ ನಿರ್ವಹಣೆಗಾಗಿ ರೂ.38 ಕೋಟಿಗಳು * ಕೆರೆಗಳ ನಿರ್ವಹಣೆಗಾಗಿ ರೂ.35 ಕೋಟಿಗಳು * ಭೂಸ್ವಾಧೀನ ಪ್ರಕ್ರಿಯೆಗಾಗಿ ರೂ.100 ಕೋಟಿಗಳು * ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗಾಗಿ ರೂ.40 ಕೋಟಿಗಳು * ಹೊಸದಾಗಿ ರಚನೆಯಾದ ವಾರ್ಡ್​ಗಳ ಕಛೇರಿ ನಿಮಾಣಕ್ಕಾಗಿ ರೂ.12 ಕೋಟಿಗಳು * ವಲಯ ಕಟ್ಟಡಗಳಿಗಾಗಿ ರೂ.10 ಕೋಟಿಗಳು * ವಿವಿದ್ದುದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ರೂ.25 ಕೋಟಿ * ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗಾಗಿ ರೂ.5 ಕೋಟಿಗಳು * ಅಂಗನವಾಡಿಗಳ ನಿರ್ಮಾಣಕ್ಕಾಗಿ ರೂ.4.50 ಕೋಟಿಗಳು * ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ ರೂ.10 ಕೋಟಿಗಳು * ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗಾಗಿ ರೂ.5 ಕೋಟಿಗಳು * ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.2.5 ಕೋಟಿಗಳು * ಹೊಸ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ. 15 ಕೋಟಿಗಳು * ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.30 ಕೋಟಿಗಳು * ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.5 ಕೋಟಿಗಳು ಕೆರೆಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು * ಅಂಡರ್ ಗೌಂಡ್ ಪಾರ್ಕಿಂಗ್ ನಿರ್ಮಾಣಕ್ಕಾಗಿ ರೂ. 5 ಕೋಟಿಗಳು * 75 ಜಂಕ್ಷನ್‌ಗಳ ಅಭಿವೃದ್ಧಿಗಾಗಿ ರೂ.150 ಕೋಟಿಗಳು * ಪ್ರತಿ ವಾರ್ಡಗೆ ರೂ.1.50 ಕೋಟಿಗಳಂತೆ ವಾರ್ಡ್ ಕಾಮಗಾರಿಗಳಿಗಾಗಿ ಒಟ್ಟು ರೂ.303.75 ಕೋಟಿಗಳು * ದಾಸರಹಳ್ಳಿ ವಲಯದಲ್ಲಿ ಬೃಹತ್ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ ರೂ.5 ಕೋಟಿಗಳು * ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು ರೂ.17.25 ಕೋಟಿಗಳು 1.ಹೊಸ 1. ವಲಯದ ಪ್ರತಿ ವಾರ್ಡಗೆ ರೂ.10 ಲಕ್ಷ 2.ಹಳೆ ವಲಯದ ಪ್ರತಿ ವಾರ್ಡಗೆ ರೂ.5 ಲಕ್ಷ * ವಿವೇಚನೆಗೆ ಒಳಪಟ್ಟ ಅನುದಾನಗಳಿಗಾಗಿ ಒಟ್ಟು ರೂ.400 ಕೋಟಿಗಳು 1. ಪೂಜ್ಯ ಮಹಾಪೌರರು ರೂ. 100 ಕೋಟಿ 2. ಮುಖ್ಯ ಆಯುಕ್ತರು ರೂ.50 ಕೋಟಿ 3. ಬೆಂಗಳೂರು ನಗರ ಉಸ್ತುವಾರಿ ಮಂತ್ರಿಗಳು ರೂ.250 ಕೋಟಿ * ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.5 ಕೋಟಿ * 110 ಹಳ್ಳಿಗಳಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.6 ಕೋಟಿ * ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ ರೂ.24 ಕೋಟಿ * ಒಂಟಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಸಹಾಯಧನ ನೀಡಲು ಒಟ್ಟು ರೂ.100 ಕೋಟಿಗಳು * ಲ್ಯಾಪ್ ಟಾಪ್‌ಗಳ ವಿತರಣೆಗಾಗಿ ರೂ.25 ಕೋಟಿಗಳು * ಹೊಲಿಗೆ ಯತ್ರಗಳ ವಿತರಣೆಗಾಗಿ ರೂ.9 ಕೋಟಿಗಳು * ವೃದ್ಧಾಶ್ರಮಗಳಿಗಾಗಿ ರೂ.16 ಕೋಟಿಗಳು * ವಿದ್ಯಾರ್ಥಿ ವೇತನ ನೀಡಲು ರೂ.5 ಕೋಟಿಗಳು * 15ನೇ ಹಣಕಾಸು ಯೋಜನೆ ಅಡಿಯ ಕಾಮಗಾರಿಗಳಿಗಾಗಿ ರೂ.461 ಕೋಟಿಗಳು * ಉದ್ಯಾನವನಗಳ ನಿರ್ವಹಣೆಗಾಗಿ ಒಟ್ಟಾರೆ ರೂ.80 ಕೋಟಿಗಳು * ಹೊಸ ವಲಯಗಳ ಉದ್ಯಾನವನಗಳಿಗೆ ರೂ.35 ಕೋಟಿ * ಹಳೆ ವಲಯಗಳ ಉದ್ಯಾನವನಗಳಿಗೆ ರೂ.45 ಕೋಟಿ * ಶಿಕ್ಷಣ ಉನ್ನತೀಕರಣ ಕಾರ್ಯಕ್ರಮಗಳಿಗಾಗಿ ರೂ.11.56 ಕೋಟಿಗಳು * ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ರೂ.700 ಕೋಟಿಗಳ ಸಹಾಯನುದಾ * ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.20 ಕೋಟಿಗಳು * ಇಂದಿರಾ ಕ್ಯಾಂಟೀನ್​ಗಾಗಿ ರೂ.50 ಕೋಟಿಗಳು * ಬೆಂಗಳೂರು ಆರೋಗ್ಯ ವ್ಯವಸ್ಥೆಗಾಗಿ ರೂ.2 ಕೋಟಿಗಳು * ಅವಿನು ಪ್ಲಾಂಟೇಷನ್‌ಗಾಗಿ ರೂ.11 ಕೋಟಿಗಳು * ಮರಗಳ ಗಣತಿಗಾಗಿ ರೂ.4 ಕೋಟಿಗಳು * ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ ರೂ.7.5 ಕೋಟಿಗಳು * Tree canopy ನಿರ್ವಹಣೆಗಾಗಿ ರೂ.14 ಕೋಟಿಗಳು * ಹೈ-ಟೆಕ್ ನರ್ಸರಿಗಳಿಗಾಗಿ ರೂ.8 ಕೋಟಿಗಳು * ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತಂತ, ಶೂ ನೀಡಲು ರೂ.25 ಕೋಟೆಗಳು * ಬೀದಿ ವ್ಯಾಪಾರಿಗಳ ವಲಯಗಳಿಗಾಗಿ ರೂ.25 ಕೋಟಿಗಳು * ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ ರೂ.210 ಕೋಟಿಗಳು * 10 ಹೊಸ ಪ್ಲಾಜಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು * ಕೊಳಗೇರಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.80 ಕೋಟಿಗಳು * ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿಗಾಗಿ ರೂ.45 ಕೋಟಿಗಳು * ಪ್ರಗತಿಯಲ್ಲಿರುವ 9 ಮೇಲು ಸೇತುವೆ ಕಾಮಗಾರಿಗಳಿಗೆ ರೂ.195 ಕೋಟಿಗಳು

BBMP Budget
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net