

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಬಿಜೆಪಿ ಅಧ್ಯಕ್ಷರು ಯಾರಾಗಿದ್ದರು ಎನ್ನುವ ಹುಡುಕಾಟ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿಯಲ್ಲೀಗ ಇದೀಗ ಮುಂದಿನ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿದೆ. ಇನ್ನು ಇಲ್ಲಿಯವರೆ ಕರ್ನಾಟಕ ಬಿಜೆಪಿಯ ಹೊಣೆಯನ್ನು ಯಾರೆಲ್ಲಾ ಹೊತ್ತೊಂಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.
1) ಎ.ಕೆ. ಸುಬ್ಬಯ್ಯ: 1980 ರಿಂದ 1983 (3 ವರ್ಷ) 2) ಬಿ.ಬಿ. ಶಿವಪ್ಪ: 1983-1988 (5 ವರ್ಷ) 3) ಬಿ.ಎಸ್. ಯಡಿಯೂರಪ್ಪ: 1988-1991 (3 ವರ್ಷ) 4) ಕೆ.ಎಸ್. ಈಶ್ವರಪ್ಪ: 1993-1998 (5 ವರ್ಷ) 5) ಬಿ.ಎಸ್. ಯಡಿಯೂರಪ್ಪ: 1998-1999 (1 ವರ್ಷ) 6) ಬಸವರಾಜ ಪಾಟೀಲ್ ಸೇಡಂಳ 2000- 2003 (3 ವರ್ಷ) 7) ಅನಂತ್ ಕುಮಾರ್: 2003- 2004 (1 ವರ್ಷ) 8) ಜಗದೀಶ್ ಶೆಟ್ಟರ್: 2004-2006(2 ವರ್ಷ) 9) ಡಿ.ವಿ. ಸದಾನಂದ ಗೌಡ: 2006-2010 (4 ವರ್ಷ) 10) ಕೆ.ಎಸ್. ಈಶ್ವರಪ್ಪ: 2010-2013 (3 ವರ್ಷ ) 11) ಪ್ರಲ್ಹಾದ್ ಜೋಶಿ-2013-2016 (3 ವರ್ಷ) 12) ಬಿ.ಎಸ್. ಯಡಿಯೂರಪ್ಪ: 2016-2019 (3 ವರ್ಷ) 13) ನಳಿನ್ ಕುಮಾರ್ ಕಟೀಲ್: 2019- (4 ವರ್ಷ) 14) ಬಿ.ವೈ. ವಿಜಯೇಂದ್ರ: 2023 (ನ. 15) ಹಾಲಿ
ವಿಧಾನಸಭಾ ಚುನಾವಣೆಯ ಸೋಲಿನಿಂದ ಪುಟಿದೆದ್ದು ಲೋಕಸಭಾ ಚುನಾವಣೆಯ ತಯಾರಿಗೆ ರಾಜ್ಯ ಬಿಜೆಪಿ ಸನ್ನದ್ಧವಾಗಬೇಕಿದೆ. ರಾಜ್ಯ ವಿಧಾನಸಭೆಯಲ್ಲಿ ಇರುವ 66 ಬಿಜೆಪಿ ಶಾಸಕರ ಪೈಕಿ ಹಲವು ಹಿರಿಯರಿದ್ದಾರೆ. ಅನುಭವಿಗಳೂ ಇದ್ದಾರೆ. ಈ ನಡುವೆ ಎನ್‌ಡಿಎ ಮೈತ್ರಿ ಕೂಟಕ್ಕೆ ಜೆಡಿಎಸ್ ಪಕ್ಷ ಸೇರ್ಪಡೆ ಆಗಿರುವ ಕಾರಣ ಕುಮಾರಸ್ವಾಮಿ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಬಹುದಾ ಅನ್ನೋ ಲೆಕ್ಕಾಚಾರವೂ ಇದೆ.