ಗಿಡಮೂಲಿಕೆ ಬೆಳೆಸಿ ಆರೋಗ್ಯವಂತರಾಗಿರೋಣ

10Npn1
Published on

ನಿಪ್ಪಾಣಿ: ಗಿಡಮೂಲಿಕೆ ನೆಟ್ಟು, ಬೆಳೆಸುವ ಮೂಲಕ ನಾವೆಲ್ಲರೂ ಆರೋಗ್ಯವಂತರಾಗಿರೋಣ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಹಾಗೂ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಿಡಮೂಲಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಪ್ರಾಚೀನ ಆಯುರ್ವೇದ ಶಾಸ ನಮಗೆ ಸಸ್ಯಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದನ್ನು ತಿಳಿಸಿಕೊಡುತ್ತದೆ. ತುಳಸಿ, ನಿಂಬೆ, ಅಶ್ವಗಂಧ, ಲೋಳಸರ ಮೊದಲಾದ ಗಿಡಮೂಲಿಕೆಗಳು ಅನೇಕ ರೋಗಗಳಿಗೆ ಮನೆಮದ್ದುಗಳಾಗಿ ಉಪಯೋಗವಾಗುತ್ತವೆ. ಮನೆ, ಶಾಲೆಗಳಲ್ಲಿ ಆಯುರ್ವೇದ ಗಿಡಮೂಲಿಕೆ ಬೆಳೆಸುವುದರಿಂದ ಮಕ್ಕಳಿಗೆ ಆಯುರ್ವೇದ ಕುರಿತು ಮಾಹಿತಿ ದೊರೆಯುತ್ತದೆ ಎಂದರು.

ಪತಂಜಲಿ ಯೋಗ ಸಮಿತಿಯ ಬಾಳಕೃಷ್ಣ ಆಚಾರ್ಯ ಅವರ ಜನ್ಮದಿನ ಅಂಗವಾಗಿ ಸ್ಥಳೀಯ ರೋಟರಿ ಕ್ಲಬ್‌ನೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ ಸುಮಾರು 60ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಎಲ್ಲ ರಕ್ತದಾನಿಗಳಿಗೆ ಕಾಣಿಕೆ ವಿತರಿಸಲಾಯಿತು.

ಜಯವಂತ ಭಾಟಲೆ, ಪ್ರಶಾಂತ ರಾಮನಕಟ್ಟಿ, ರೂಪೇಶ ಕುಂಬಾರ, ಆಶಾ ತಿಳವೆ, ಸುಪ್ರಿಯಾ ಭುಸಾರಿ, ರೂಪೇಶ ಕುಂಬಾರ, ವಿನಾಯಕ ಶಿಪ್ಪುರೆ, ವಿಶ್ವನಾಥ ಢೇಕಳೆ, ವಿಶಾಲ ಮೆಳವಂಕಿ, ಸಂಜಿವನಿ ರಾಮನಕಟ್ಟಿ, ವಿಜಯ ಟವಳೆ, ಕರುಣಾ ರಾಮನಕಟ್ಟಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದರು.

ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಆಯುರ್ವೇದಿಕ ವೈದ್ಯಾಧಿಕಾರಿ ಡಾ. ಮಂಜುನಾಥ ದುಂಡಿ, ಡಾ.ದಾನಮ್ಮ ಹಂಜಿ, ಪತಂಜಲಿ ಯೋಗ ಸಮಿತಿ ಘಟಕದ ಅಧ್ಯಕ್ಷ ಜೆ.ಡಿ.ಶಿಂಧೆ, ಉಪಾಧ್ಯಕ್ಷ ದಶರಥ ಕುಂಭಾರ, ಸುನೀಲ ಪಾಟೀಲ, ಸುಭಾಷ ಮೆಹತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net