ಗಿಡಮೂಲಿಕೆ ದಿನಾಚರಣೆ

GIDAMOOLIKE
Published on

ಯಲ್ಲಾಪುರ: ಪಟ್ಟಣದ ಅಡಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಶುಕ್ರವಾರ ಗಿಡಮೂಲಿಕೆ ದಿನ ಆಚರಿಸಲಾಯಿತು.

ಸಮಿತಿಯ ತಾಲೂಕು ಅಧ್ಯಕ್ಷ ವಿ.ಕೆ.ಭಟ್ಟ ಶೀಗೆಪಾಲ ಮಾತನಾಡಿ, ಆಧುನಿಕ ಧನ್ವಂತರಿ ಎಂದೇ ಖ್ಯಾತರಾದ, ಆಯುರ್ವೇದ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರಿದ ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಅವರ ಜನ್ಮ ದಿನಾಚರಣೆಯನ್ನು ಜಡಿ ಬೂಟಿ ದಿವಸ್ (ಗಿಡ ಮೂಲಿಕೆ ದಿನ) ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿವಿಧ ಗಿಡಮೂಲಿಕ ಔಷಧ ಸಸ್ಯಗಳನ್ನು ವಿತರಿಸಲಾಯಿತು. ಸಮಿತಿಯ ಉಪಾಧ್ಯಕ್ಷ ನಾಗೇಶ ರಾಯ್ಕರ್, ಕಾರ್ಯದರ್ಶಿ ಸತೀಶ ಹೆಗಡೆ, ಜಿಲ್ಲಾ ಪತಂಜಲಿ ಯುವ ಭಾರತ ಪ್ರಭಾರಿ ದಿವಾಕರ ಮರಾಠಿ, ಜಿಲ್ಲಾ ಯೋಗ ವಿಸ್ತರಕ ಸುಬ್ರಾಯ ಭಟ್ಟ ಆನೆಜಡ್ಡಿ, ಸಹ ಪ್ರಭಾರಿ ಕನಕಪ್ಪ, ಜಿ.ಎಸ್. ಭಟ್ಟ ಹಳವಳ್ಳಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net