ವ್ಯಾಪಾರಕ್ಕೆಂದು ಬೆಂಗಳೂರಿಗೆ ಹೋದ ಪತಿ ನಾಪತ್ತೆ

3-pnp 5 praveenkumar
ಪ್ರವೀಣ್‌ಕುಮಾರ್
Published on

ಪಾಂಡವಪುರ: ವ್ಯಾಪಾರಕ್ಕಾಗಿ ಬೆಂಗಳೂರಿಗೆ ಹೋಗುತ್ತೇನೆ ಎಂದು ಮನೆ ಬಿಟ್ಟು ಹೋದವರು ಈವರೆಗೂ ಹಿಂದಿರುಗಿಲ್ಲ. ಕಾಣೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಆತನ ಪತ್ನಿ ಸುಮಿತ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಲೂಕಿನ ಹಳೇಬೀಡು ಗ್ರಾಮದ ನಿವಾಸಿ ಪ್ರವೀಣ್‌ಕುಮಾರ್ (32) ಕಾಣೆಯಾದವರು. ಇವರು ಕಳೆದ ಜೂನ್ 17ರಂದು ಬೆಳಗ್ಗೆ ಬೆಂಗಳೂರಿಗೆ ಹೋಗಿ ಅಲ್ಲೇ ವ್ಯಾಪಾರ ಮಾಡುತ್ತೇನೆ. ಅಲ್ಲಿಗೆ ಹೋದ ಬಳಿಕ ಕರೆ ಮಾಡುತ್ತೇನೆ ಎಂದು ಮನೆಯಲ್ಲಿ ತಿಳಿಸಿ ಬಂಡವಾಳಕ್ಕಾಗಿ ಮನೆಯಿಂದ 3.5 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾರೆ. ಅಂದು ಮನೆಯಿಂದ ಹೋದವರು ಈವರೆಗೂ ಹಿಂದಿರುಗಿಲ್ಲ. ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಮನೆ ಸೇರಿದಂತೆ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಕಾಣೆಯಾದವರನ್ನು ಪತ್ತೆ ಮಾಡಿಕೊಡುವಂತೆ ಆತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದವರ ಚಹರೆ ದುಂಡು ಮುಖ, ಕಪ್ಪು ತಲೆಗೂದಲು, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಅಂಗಿ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net