ಮೂಲವ್ಯಾಧಿ ತಪಾಸಣೆ ಶಿಬಿರ

free-medical-camp
Published on

ಹುಬ್ಬಳ್ಳಿ: ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ವಿಶ್ವ ಪೈಲ್ಸ್ ದಿನಾಚರಣೆ ಅಂಗವಾಗಿ ನಗರದ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಶಲ್ಯ ತಂತ್ರ ವಿಭಾಗದಲ್ಲಿ ಉಚಿತ ಮೂಲವ್ಯಾಧಿ, ಫಿಷರ್ ರೋಗದ ತಪಾಸಣೆ ಶಿಬಿರವನ್ನು ನ. 20ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.

ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಮಾರ್ಕಂಡೆಯ ಜೇಡರ, ಡಾ. ಸುಮಲತಾ ವಿ.ಕೆ., ಡಾ. ಗಣೇಶ ಬೆಲ್ಲದ, ಡಾ. ಸುನಿಧಿ ಜೋಶಿ ಶಿಬಿರದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net