ಗಮನ ಸೆಳೆಯುತ್ತಿದೆ ಹೆಮ್ಮನಹಳ್ಳಿ ಕೂಸಿನ ಮನೆ

04M.D.R.2
Published on

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿರುವ ಕೂಸಿನ ಮನೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಜತೆಗೆ ಸ್ವಂತ ಸಂಪನ್ಮೂಲದಿಂದ ಸುಮಾರು 2,41,255 ರೂ.ಗಳನ್ನು ವೆಚ್ಚ ಮಾಡಿ ಶಿಥಿಲಗೊಂಡಿದ್ದ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೊಠಡಿಯನ್ನು ಸುಂದರವಾದ ಕೂಸಿನ ಮನೆಯನ್ನಾಗಿ ಪರಿವರ್ತನೆ ಮಾಡಿರುವುದು ಗಮನ ಸೆಳೆದಿದೆ.

ಹೆಮ್ಮನಹಳ್ಳಿ ಗ್ರಾಮದಲ್ಲಿ ಕೂಸಿನ ಮನೆಯನ್ನು 2024ರ ಫೆ.12ರಂದು ಉದ್ಘಾಟನೆೆ ಮಾಡಲಾಗಿತ್ತು. ಕೂಸಿನ ಮನೆಯು ಪ್ರತಿದಿನ ಸರ್ಕಾರಿ ರಜೆ ದಿವಸಗಳನ್ನು ಹೊರತುಪಡಿಸಿ, ಬೆಳಿಗ್ಗೆ 9ರಿಂದ ಸಂಜೆ 3.30 ರವರೆಗೆ ಕಾರ್ಯನಿರ್ವಹಿಸುತ್ತಿದೆ. 6 ಜನ ಕೇರ್ ಟೇಕರ್ಸ್‌ಗಳು ತರಬೇತಿ ಪಡೆದು ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರಿಗೆ ಮನರೇಗಾ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಎನ್‌ಎಂಆರ್ ಸೃಜಿಸಿ ಪ್ರತಿದಿವಸ ಮನರೇಗಾ ಕೂಲಿ ದರದಂತೆ ವೇತನ ಪಾವತಿಸಲಾಗುತ್ತಿರುತ್ತದೆ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳುನಡೆಯದ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯ ಅನುದಾನದಲ್ಲಿ ಕೇರ್ ಟೇಕರ್ಸ್‌ಗಳಿಗೆ ವೇತನ ಪಾವತಿಸಲಾಗುತ್ತಿದೆ.

ಪ್ರಸ್ತುತ ಕೂಸಿನ ಮನೆಯಲ್ಲಿ ಸುಮಾರು 24 ಮಕ್ಕಳು ನೋಂದಣಿಯಾಗಿದ್ದು. ಪ್ರತಿ ದಿವಸ ಸರಾಸರಿ 13 ಮಕ್ಕಳು ಕೂಸಿನ ಮನೆಗೆ ಹಾಜರಾಗುತ್ತಿರುತ್ತಾರೆ. ಇದರಿಂದಾಗಿ ಪಾಲಕರಿಗೆ ಬಹಳ ಅನುಕೂಲವಾಗಿದ್ದು. ಮಕ್ಕಳನ್ನು ಕೂಸಿನಮನೆಯಲ್ಲಿ ಬಿಟ್ಟು ತಾವು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗಿದೆ. ಈ ಅಧಿಕಾರಿಗಳು ಹೆಮ್ಮನಹಳ್ಳಿನ ಕೂಸಿನ ಮನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net