ಕುಡ್ಲೂರು ಸಹಕಾರ ಸಂಘಕ್ಕೆ ಹೇಮಚಂದ್ರ ಅಧ್ಯಕ್ಷ

TKE vss
ಕುಡ್ಲೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಜೆ.ಹೇಮಚಂದ್ರ, ಉಪಾಧ್ಯಕ್ಷೆ ಪ್ರೇಮಾ ಅವರನ್ನು ಸದಸ್ಯರು ಸನ್ಮಾನಿಸಿದರು. ಆರ್.ಸುನಂದಮ್ಮ, ಮೈಲಾರಪ್ಪ ಇತರರಿದ್ದರು.
Published on

ತರೀಕೆರೆ: ಕುಡ್ಲೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಜೆ.ಹೇಮಚಂದ್ರ, ಉಪಾಧ್ಯಕ್ಷೆಯಾಗಿ ಪ್ರೇಮಾ ಅವಿರೋಧ ಆಯ್ಕೆಯಾದರು.

ಮಂಗಳವಾರ ಎನ್.ಜೆ.ಹೇಮಚಂದ್ರ, ಪ್ರೇಮಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಸುನಂದಮ್ಮ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಎನ್.ಜೆ.ಹೇಮಚಂದ್ರ, ತಾಲೂಕಿಗೆ ಮಾದರಿ ಸಂಘವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಎಲ್ಲರ ಸಹಕಾರ ಅಗತ್ಯ ಎಂದರು. ನಿರ್ದೇಶಕರಾದ ಎಂ.ಆರ್.ಚಂದ್ರಮೌಳಿ, ವಿನಯ್, ಮೈಲಾರಪ್ಪ, ಕೆ.ಬಿ.ಚಂದ್ರಶೇಖರ್, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net