

ದೇವದುರ್ಗ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಆಧ್ಯಾತ್ಮಿಕ ಚಿಂತನಾ ಚೆಲುಮೆಯಾಗಿದ್ದರು. ಭಗವಂತನ ಸಾಕ್ಷಾತ್ಕಾರ ಪಡೆಯಲು ಮಾರ್ಗ ತೋರಿಸಿದ್ದು, ಅವರ ಆದರ್ಶಗಳು ಮನುಷ್ಯನ ಬದುಕಿಗೆ ದಾರಿದೀಪವಾಗಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಮಲ್ಲಮ್ಮರ ಜೀವನ ಚರಿತ್ರೆ ಮನುಕುಲಕ್ಕೆ ಮಾದರಿಯಾಗಿದ್ದು, ಭರತ ಭೂಮಿ ಕಂಡ ಶ್ರೇಷ್ಠ ಮಹಿಳೆ ಎಂದು ಬಣ್ಣಿಸಿದರು.
ಹಿರಿಯ ಅಧಿಕಾರಿ ನಾಗೇಂದ್ರಪ್ಪ ಮುಖಂಡರಾದ ಲಕ್ಷ್ಮಣ ಕೊಪ್ಪರ್, ಅನಿಲ್ ಕುಮಾರ್, ಸರ್ದಾರ್, ರವಿಕುಮಾರ್ ಬಲಿದವ್, ವೆಂಕಟೇಶ್ ದಾಸರ್, ಕನಕಪ್ಪ, ಹರೀಶ್ ಇತರರಿದ್ದರು.