

ಕೆರೂರ: ಹೇಮರೆಡ್ಡಿ ಮಲ್ಲಮ್ಮನ ತತ್ವಾದರ್ಶಗಳು ಸ್ತ್ರೀ ಕುಲಕ್ಕೆ ಮಾದರಿಯಾಗಿವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹೇಳಿದರು.
ಸ್ಥಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಷ್ಟದ ಜೀವನದಲ್ಲಿ ಕುಟುಂಬದ ನಿರ್ವಹಣೆ ಮಾಡಿ ಇಡೀ ಸಮಾಜಕ್ಕೆ ಹೇಮರೆಡ್ಡಿ ಮಲ್ಲಮ್ಮ ಸ್ಫೋರ್ತಿಯಾಗಿದ್ದರು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಪಂ ಸದಸ್ಯ ಕುಮಾರ ಐಹೊಳ್ಳಿ, ಬಸವರಾಜ ಕಟ್ಟಿಮನಿ, ನವೀನ ಮಾಹಜನ್ನವರ, ಷಣ್ಮುಖ ತೇಲಿ, ಅಶೋಕ ಬುಕನಟ್ಟಿ, ತಿಪ್ಪಣ್ಣ ಪಾಗದ, ಬಸು ಪೂಜಾರ ಇದ್ದರು.