ಸ್ತ್ರೀ ಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಆದರ್ಶಪ್ರಾಯ

ilk 27-1
ಇಲಕಲ್ಲ ತಾಲೂಕಿನ ಸಮೀಪದ ಗೊರಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಡಾ. ಚೆನ್ನಬಸವದೇಶಿಕೇಂದ್ರ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು. ಅರವಿಂದಗೌಡ ಗೌಡರ, ರಾಮನಗೌಡ ಕವಡಿಮಟ್ಟಿ, ಸಂತೋಷ ಬಂಡರಗಲ್ಲ, ಅಮರೇಶ ರಾಂಪೂರ, ಸಂಗನಗೌಡ ಗೌಡರ, ವಿಜಯ ತಾಳಿಕೋಟಿ ಇತರರಿದ್ದರು.
Published on

ಇಲಕಲ್ಲ: ಹೇಮರಡ್ಡಿ ಮಲ್ಲಮ್ಮಳ ತತ್ವಾದರ್ಶಗಳನ್ನು ಹೆಣ್ಣುಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಂದವಾಡಗಿಯ ಡಾ. ಚೆನ್ನಬಸವ ಶಿವಾಚಾರ್ಯರು ಹೇಳಿದರು.

ಸಮೀಪದ ಗೊರಬಾಳದಲ್ಲಿ ಸೋಮವಾರ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುರುಕು ಗುಡಿಸಲಿನಲ್ಲಿ ವಾಸಿಸುತ್ತ ಹಳಸಿದ ಅಂಬಲಿಯನ್ನೆ ಶಿವನಿಗೆ ಅರ್ಪಿಸಿ ಶಿವನನ್ನು ಒಲಿಸಿಕೊಂಡ ಮಹಾತಾಯಿ ಮಲ್ಲಮ್ಮ. ಸ್ತ್ರೀ ಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಆದರ್ಶಪ್ರಾಯ ಆಗಿದ್ದಾರೆ ಎಂದರು.

ಬೆಳಗ್ಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರ ಹಾಗೂ ಕುಂಭ ಮೆರವಣಿಗೆ ನಡೆಯಿತು. ನಂತರ ಅನ್ನಪ್ರಸಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ಗಾನಗಂಧರ್ವ ಮೆಲೋಡಿಸ್ ತಂಡದ ಮಹಾಂತೇಶ ಅಂಗಡಿ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಅರವಿಂದಗೌಡ ಗೌಡರ, ರಾಮನಗೌಡ ಕವಡಿಮಟ್ಟಿ, ಸಂತೋಷ ಬಂಡರಗಲ್ಲ, ಅಮರೇಶ ರಾಂಪೂರ, ಸಂಗನಗೌಡ ಗೌಡರ, ವಿಜಯ ತಾಳಿಕೋಟಿ, ಪರಶುರಾಮ ಅಮಾತ್ಯಪನವರ, ವಿಜಯ ಗಂಗನವರ ಸೇರಿ ಹಲವಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net