

ಕವಿತಾಳ: ಸಮೀಪದ ಜಂಗಮರಹಳ್ಳಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಸೋಮವಾರ ಆಚರಿಸಲಾಯಿತು. ಯದ್ದಲದಿನ್ನಿ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾದ ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟಿಸಿದ ಗ್ರಾಮದ ಪ್ರಮುಖ ಶರಣೇಗೌಡ ಮಾಲಿಪಾಟೀಲ್ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮಹಾಸಾಧ್ವಿಯಾಗಿದ್ದರು. ಪರಶಿವನಲ್ಲಿ ರಡ್ಡಿ ಸಮಾಜವು ದಾರಿದ್ರೃದಿಂದ ಮುಕ್ತಿಯಾಗುವ ವರ ಬೇಡಿದ್ದರು.
ಅವರ ತತ್ವಾದರ್ಶ ಮೈಗೂಡಿಸಿಕೊಂಡು ನಡೆಯಬೇಕು ಎಂದರು. ಸಮಾಜದ ತಾಲೂಕು ಅಧ್ಯಕ್ಷ ಕುಮಾರಪ್ಪ ಕಮತರ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ, ಉನ್ನತ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಪ್ರಮಖರಾದ ಶರಣಬಸವ ಜಿನ್ನಾಪುರ, ವೆಂಕಟೇಶ ಸಾಹುಕಾರ, ಬಸವರಾಜ ರಾಮತ್ನಾಳ, ಬಸವರಾಜ ವಡಗೇರ, ಗುಂಡಪ್ಪ ಹಸ್ಮಕಲ್, ಬಸನಗೌಡ ಪೊಪಾ, ಮಲ್ಲಿಕಾರ್ಜುನ ಬನ್ನಿಕೊಪ್ಪ, ಜಯವರ್ಧನ ಯದ್ದಲದಿನ್ನಿ ಇತರರಿದ್ದರು.