ನಾಳೆಯಿಂದ ಹೇಮಂತ ಲಾಸ್ಯ ಸಂಗೀತೋತ್ಸವ

Koppa music
ಕೊಪ್ಪದಲ್ಲಿ ಹೇಮಂತ ಲಾಸ್ಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಆರ್.ರಮೇಶ್ ಬಿಡುಗಡೆಗೊಳಿಸಿದರು. ಉದಯ್‌ಕುಮಾರ್, ಮಮತಾ, ಶ್ರುತಿ ಇತರರಿದ್ದರು.
Published on

ಕೊಪ್ಪ: ಮಯೂರಿ ನಾಟ್ಯಕಲಾ ಕೇಂದ್ರದಿಂದ ಮೇ 18 ಮತ್ತು 19ರಂದು ದ್ಯಾವೇಗೌಡ ವೃತ್ತದ ಅಂಚೆ ಕಚೇರಿ ಎದುರು ಹೇಮಂತ ಲಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಆರ್.ರಮೇಶ್ ತಿಳಿಸಿದರು.

18ರಂದು ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸುಧಾಕರ್ ಎಸ್. ಶೆಟ್ಟಿ, ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ಡಾ. ಅನಿತಾ ನಟರಾಜ್ ಇತರರು ಭಾಗವಹಿಸಲಿದ್ದಾರೆ. ಸಂಗೀತೋತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸೌರಭವನ್ನು ಶ್ರೀ ಸಾಯಿಶಿವ ಕಲಾಲಯದ ವಿದ್ಯಾರ್ಥಿವೃಂದ ಪ್ರಸ್ತುತ ಪಡಿಸಲಿದೆ. ಸುಗಮ ಸಂಗೀತವನ್ನು ಕೊಪ್ಪ ಪಾಂಚಜನ್ಯ ಸಂಗೀತ ತಂಡ ನಡೆಸಿಕೊಡಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ವಿದುಷಿ ಶ್ರುತಿ ಎಸ್. ಭಟ್ ನಡೆಸಿಕೊಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
19ರಂದು ನೃತ್ಯೋತ್ಸವ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಉದ್ಘಾಟಿಸಲಿದ್ದಾರೆ. ಗೌರಿಗದ್ದೆ ದತ್ತಾವಧೂತ ವಿನಯ್ ಗುರೂಜಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಎಚ್.ಜಿ.ವೆಂಕಟೇಶ್, ರಾಧಿಕಾ ಸಹದೇವ್ ಭಾಗವಹಿಸಿಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮಯೂರಿ ನಾಟ್ಯ ಕಲಾ ಕೇಂದ್ರದ ಉದಯ್‌ಕುಮಾರ್, ವಿದುಷಿ ಮಮತಾ ಮಯೂರಿ, ನಟರಾಜ್ ಗೋಗಟ್ಟೆ, ಶ್ರುತಿ ರೋಹಿತ್, ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net