

ರಾಯಚೂರು ಸಾರ್ವಜನಿಕರಿಗೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಹೇಮನಾಳ ಗ್ರಾಪಂ ಅಭಿವೃದ್ದಿ ಅಽಕಾರಿ ವಿ-Àಲರಾಗಿದ್ದಾರೆ ಎಂದು ಆರೋಪಿಸಿ ಕೂಡಲೇ ಪಿಡಿಓ ಅವರನ್ನು ವರ್ಗವಣೆ ಮಾಡಬೇಕೆಂದು ಗ್ರಾಮಸ್ಥರು ಸೋಮವಾರ ಡಿಸಿ ಕಚೇರಿಯ ಗ್ರೇಡ್-೦೨ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.
ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ಕಲೆದ ೧೦ ವರ್ಷಗಳಿಂದ ಚುನಾವಣೆ ನಡೆಯದೆ, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ತತ್ತರಿಸಿ ಹೋಗಿz್ದÁರೆ. ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪ, ಕನಿಷ್ಟ ಮೂಲ ಸೌಲಭ್ಯ ಮರಿಚಿಕೆಯಾಗಿ ಪಂಚಾಯತಿಗೆ ಬರುವ ಕೊಟಗಟ್ಟಲೆ ಅನುದಾನ ಪಿ.ಡಿ.ಓ. ರವರ ಜೇಬಿಗೆ ಸೇರುತ್ತದೆ ಆರೋಪಿಸಿದರು.
ಪಂಚಾಯತಿ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ೧೫ ನೇ ಹಣಕಾಸಿನ ಕಾಮಗಾರಿ ನಡೆಯದೆ ಇರುವುದು, ಅನುಮಾನಕ್ಕೆ ದಾರಿಯಾಗಿದೆ. ಪಂಚಾಯತಿಯ ಹಣ ಕೊಳ್ಳೆ ಹೊಡೆಯುವ ಈತನ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಲು ಒಂದು ವಾರ ಗಡಿವಿನೊಳಗೆ ಪಿ.ಡಿ.ಓ. ರವರನ್ನು ಬೇರೆ ಕಡೆ ವರ್ಗಾವಣೆ ಮಾಡದಿದ್ದರೆ ಹೇಮನಾಳï ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಬೀಗ ಮುದ್ರೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗರಾಜ ಖಾನಾಪುರ, ಶಾಂತಕುಮಾರ ಹೊನ್ನಟಗಿ,ಮೂರ್ತಿ ನಾಯಕ,ಬಸವರಾಜ,ಬಸವಲಿಂಗಪ್ಪ ಸೇರಿ ಅನೇಕರು ಇದ್ದರು.