ಶುಶ್ರೂಷಾಧಿಕಾರಿ ಕೆ.ಎಸ್. ಹೇಮಲತಾ ವಯೋ ನಿವೃತ್ತಿ- ಸನ್ಮಾನ

Oplus_131072
Oplus_131072
Published on

 ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶುಶ್ರೂಷಾಧಿಕಾರಿ ಕೆ.ಎಸ್. ಹೇಮಲತಾ ಅವರನ್ನು ಆಸ್ಪತ್ರೆಯ ಸಿಬ್ಬಂದಿಗಳು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.

ಕಳೆದ 29 ವರ್ಷಗಳಿಂದ ಆಸ್ಪತ್ರೆಯ ಉತ್ತಮ ಸೇವೆಸಲ್ಲಿಸಿದ್ದಾರೆ. ರೋಗಿಗಳನ್ನು ತುಂಬ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರು ಕೂಡ ಹೇಮಲತಾ ಅವರನ್ನು ಕಂಡರೆ ಅತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ಎಂದು ವೈದ್ಯಾಧಿಕಾರಿ ಶಿವಪ್ರಸಾದ್ ಹೇಳಿದರು. ಈ ಸಂದರ್ಭ ಆಸ್ಪತ್ರೆಯ ವೈದ್ಯರುಗಳಾದ ಕಿರಣ್, ಜಮೀರ್ ಅಹಮ್ಮದ್, ಅಫ್ರಿನ್ ಸೇರಿದಂತೆ ಶುಶ್ರೂಷಕರು, ಸಿಬ್ಬಂದಿಗಳು ಹೇಮಲತಾ ಅವರ ಪತಿ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ರವಿ ಉತ್ತಯ್ಯ   ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net