ಜೀವ ಉಳಿಸಲು, ಆರೋಗ್ಯ ವೃದ್ಧಿಗೆ ರಕ್ತದಾನ ಸಹಕಾರಿ

06 -SBG-2 Health Camp (2)
ಗಣಪತಿ ಪೆಂಡಾಲ್‌ನಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಡಾ. ಅರುಣ್‌ಕುಮಾರ ಉದ್ಘಾಟಿಸಿದರು. ಅಶೋಕ್, ಸುಕುಮಾರ್, ಎಚ್.ಜಿ.ಭರತ್‌ಕುಮಾರ್, ಡಾ. ಜೀವನ್, ಡಾ. ಸಂಸದ, ಡಾ. ಸಂದೀಪ್ ಹಾಗೂ ಎಸ್.ಮಹಾದೇವ್ ಇದ್ದರು.
Published on

ಶ್ರವಣಬೆಳಗೊಳ: ರಕ್ತದಾನವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಕಾರ್ಯವಾಗಿದ್ದು, ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಹಾಗೂ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ ಹೇಳಿದರು.

ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ರೆಡ್‌ಕ್ರಾಸ್, ಮೈಸೂರಿನ ನಾರಾಯಣ ಆಸ್ಪತ್ರೆ, ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ, ಚನ್ನರಾಯಪಟ್ಟಣದ ಸ್ವಯಂಪ್ರೇರಿತ ರಕ್ತ ಕೇಂದ್ರ, ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಜೀವ ದಾನವಾಗಿದ್ದು, ಇದು ಮನುಷ್ಯನು ಮನುಷ್ಯನಿಗೆ ನೀಡಬಹುದಾದ ಅತಿದೊಡ್ಡ ಕೊಡುಗೆಯಾಗಿದೆ. ಅಪಘಾತ ಸಂದರ್ಭಗಳಲ್ಲಿ ಗಾಯಗೊಂಡ ಅಥವಾ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ರೋಗಿಗಳ ಜೀವ ರಕ್ಷಣೆ ಮಾಡಲು ಸಹಕಾರಿ. ರಕ್ತದಾನದಿಂದ ನಮ್ಮ ಆರೋಗ್ಯಕ್ಕೂ ಸಹಾಯಕವಾಗಿದ್ದು, ನಮ್ಮ ದೇಹದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಹೊರಹಾಕಿ ಹೊಸ ರಕ್ತದ ಉತ್ಪತ್ತಿಯಾಗುತ್ತದೆ. ಹೃದಯಘಾತ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ ಮಾತನಾಡಿ, ರಕ್ತದಾನವು ಜನರ ನಡುವೆ ಸಹಕಾರ ಭಾವನೆಯ ಮೂಲಕ ಸಮಾಜದಲ್ಲಿ ಬಾಂಧವ್ಯ ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮಗಳು ಯುವಜನತೆಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶೀಬಿರಗಳನ್ನು ನಡೆಯುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪುಷ್ಟಿ ನೀಡುತ್ತವೆ. ಮುಂದೆಯೂ ಇಂತಹ ಶಿಬಿರಗಳನ್ನು ಹೆಚ್ಚಾಗಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ಶಿಬಿರದಲ್ಲಿ ಇಸಿಜಿ, ಬಿಪಿ, ಶುಗರ್, ಕಣ್ಣು ಪರೀಕ್ಷೆ, ಕೀಲು ಮತ್ತು ಮೂಳೆ ತಪಾಸಣೆ, ಪ್ರಸೂತಿ ಮತ್ತು ಸ್ತ್ರೀ ರೋಗ ಹಾಗೂ ಇತರ ಕಾಯಿಲೆಗೆ ಸಂಬಂಧಿಸಿದಂತೆ ಸುಮಾರು 283 ಜನರ ತಪಾಸಣೆ ಮಾಡಲಾಯಿತು. 41 ಜನ ರಕ್ತದಾನ ಮಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷರಾದ ಶರತ್‌ಕುಮಾರ್, ಎಸ್.ಟಿ.ಮಹೇಶ್, ಎಸ್.ಆರ್.ಲೋಕೇಶ್, ಭಾರತಿ ಚಂದ್ರೇಗೌಡ, ಪ್ರಸನ್ನ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳಾದ ಅಶೋಕ್, ಸುಕುಮಾರ್, ಗೋವಿಂದರಾಜ್, ನಾಗೇಂದ್ರ, ರಂಗಸ್ವಾಮಿ, ಡೋಲಿ ಅಶೋಕ್, ನವೀನ್, ಧರ್ಮರಾಜ್, ಸೋಮೇಶ್, ಸ್ವಯಂಪ್ರೇರಿತ ರಕ್ತ ಕೇಂದ್ರ ಮುಖ್ಯಸ್ಥ ಎಚ್.ಜಿ.ಭರತ್‌ಕುಮಾರ್, ನಾರಾಯಣ ಆಸ್ಪತ್ರೆಯ ಡಾ. ಜೀವನ್, ಡಾ. ಸಂಸದ, ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ಡಾ. ಸಂದೀಪ್ ಹಾಗೂ ಆಪ್ತ ಸಮಾಲೋಚಕ ಎಸ್.ಮಹಾದೇವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net