

ವಿಜಯಪುರ: ಮನಸ್ಸು ಮತ್ತು ದೇಹ ಸಂಪರ್ಕಿಸುವ ಮೂಲಕ ಅವೆರಡನ್ನೂ ಸಮತೋಲನದಲ್ಲಿರಿಸುವ ಪ್ರಾಚಿನ ಕಲೆಯೇ ಯೋಗ ಎಂದು ಶಾಲೆ ಆಡಳಿತಾಧಿಕಾರಿ ವರುಣಕುಮಾರ ಕುಲಕರ್ಣಿ ಹೇಳಿದರು.
ನಗರದ ಗುರುಕುಲ ಎಆರ್ಜೆ ಇಂಟರ್ನ್ಯಾಷನಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿಗೆ ಭಾರತ ನೀಡಿದ ಉನ್ನತ ಕೊಡುಗೆ ಯೋಗ ಎಂದರು. ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಧನರಾಜ ಬಸವಂತಿ ಮಾತನಾಡಿ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರಿಂದ ದೇಹ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಬಹುದಾಗಿದೆ ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಶಾರುಖ್ ತಹಸೀಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿ ಯೋಗ ಶಿಕ್ಷಕ ಮಹಾಂತೇಶ ತಾಳಿಕೋಟಿ ಮಕ್ಕಳಿಗೆ ಯೋಗಾಸನ ಕಲಿಸುವ ಜತೆಗೆ ಅದರ ಬಗ್ಗೆ ಮಾಹಿತಿ ನೀಡಿದರು.
ಬಾಪುರಾಯ ಮೇಡೆಗಾರ ಸ್ವಾಗತಿಸಿದರು. ಬಿಕ್ರಂ ನಿರೂಪಿಸಿದರು. ದಿಲೀಪಕುಮಾರ್ ಗಜಕೋಶ ವಂದಿಸಿದರು.