

ಮಡಿಕೇರಿ:
ನಗರದ ಪಿ.ಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿಯ ಬಗ್ಗೆ ಅರಿವು ಕಾರ್ಯಕ್ರಮವು ಬುಧವಾರ ನಡೆಯಿತು. ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣಾಧಿಕಾರಿ ಸುಮತಿ ಮಕ್ಕಳ ಸಹಾಯವಾಣಿ 112 ರ ಬಗ್ಗೆ ಮಾಹಿತಿ ನೀಡಿದರು.
ಯಾರೇ ಆದರೂ ಅಸಭ್ಯವಾಗಿ ನಡೆದುಕೊಂಡರೆ, ಮೊದಲಿಗೆ 112 ಅನ್ನು ಮೊಬೈಲ್‌ನಲ್ಲಿ ಡಯಲ್ ಮಾಡಿದ ನಂತರ 8ನೇ ನಂಬರ್ ಅಥವಾ ಸಂಖ್ಯೆಗೆ ಡಯಲ್ ಮಾಡಿ ಸಮಸ್ಯೆ ತಿಳಿಸಲು ಮನವರಿಕೆ ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ ಮಾತನಾಡಿ ಮಕ್ಕಳು ಅರಿತುಕೊಂಡ ಮಾಹಿತಿಯನ್ನು ಹಾಗೂ ಶಾಲಾ ಉಪಹಾರ ಬಿಸಿಯೂಟ ಹಾಗೂ ಪಾಠಕ್ಕೆ ಸಂಬAಧಿಸಿದAತಹ ಸಮಸ್ಯೆಗಳ ವಿವರಗಳನ್ನು ಕೂಡ 112 ಸಹಾಯವಾಣಿಯ ಮೂಲಕ ತಿಳಿಸಬಹುದು ಎಂದರು.
ಮಡಿಕೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಮೋಹನ ಕುಮಾರಿ ಮಾತನಾಡಿ ಮಕ್ಕಳಿಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಇಲಾಖೆಯ ಜೋಸೆಫ್ ಮಾತನಾಡಿ 112 ಸಹಾಯವಾಣಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಸಮಸ್ಯೆಯನ್ನು ಬಗೆಹರಿಸಲು ಸಹಾಯಕವಾಗಿದೆ ಎಂದು ತಿಳಿಸಿದರು.
ಇಸಿಒ ಜಾನೆಟ್, ಸರ್ಕಾರಿ ಪ್ರೌಢ ಶಾಲೆಯ ಜಗದೀಶ್, ಹಿರಿಯ ಮುಖ್ಯೋಪಾಧ್ಯಾಯಿನಿ ಸುಶೀಲ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.