

ಸಿರವಾರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಆಸರೆ ಯೋಜನೆಯಡಿ ಪಟ್ಟಣದ ಅಸಹಾಯಕ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿ ಕೊಡಲು ಶುಕ್ರವಾರ ಭೂಮಿ ಪೂಜೆ ಮಾಡಲಾಯಿತು.
ತಾಲೂಕು ಯೋಜನಾಧಿಕಾರಿ ಚಂದ್ರಹಾಸ ಮಾತನಾಡಿ, ಪಟ್ಟಣದ ನೀಲಮ್ಮ ಕಾಲನಿಯ ಜಾಹಿರಾಬೀಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿ ತಿಂಗಳು ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಆದರೆ, ವಾಸ ಮಾಡಲು ಮನೆಯಿಲ್ಲದೆ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದಾರೆ.
ಹೀಗಾಗಿ ವಾತ್ಸಲ್ಯ ಆಸರೆ ಯೋಜನೆಯಡಿ 1.15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಯ್ಯನಗೌಡ ಏರೆಡ್ಡಿ, ಸಂಜೀವಿನಿ ಟ್ರಸ್ಟ್‌ನ ಜ್ಞಾನಮಿತ್ರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಯಶೋದಾ, ವಲಯ ಮೇಲ್ವಿಚಾರಕಿ ವನಿತಾ, ಹಣಕಾಸು ಪ್ರಬಂಧಕ ಪ್ರಮೋದ್, ರಮೇಶ್, ಶೇಷಪ್ಪ, ರವಿಚಂದ್ರ, ಸೇವಾ ಪ್ರತಿನಿಧಿ ಪರ್ವಿನ್, ಸೌಮ್ಯಾ, ಶಿವರಾಜ ಜಗ್ಲಿ ಇತರರಿದ್ದರು.