ಆರ್ಥಿಕ ಸ್ವಾವಲಂಬನೆಗೆ ಖಾತ್ರಿ ಸಹಕಾರಿ

Siddapur
Published on

ಸಿದ್ದಾಪುರ: ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಅಭಿವೃದ್ಧಿ ಜತೆಗೆ ಬಡವರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉಯ್ಯಲೆಮನೆಯಲ್ಲಿ ನಿರ್ಮಿಸಿದ ಘನತ್ಯಾಜ್ಯ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ತ್ಯಾಜ್ಯ ವಿಲೇವಾರಿ ಘಟಕದಿಂದ ಸ್ವಚ್ಛ ಹಾಗೂ ಸುಂದರ ಪರಿಸರಕ್ಕೆ ಸಾರ್ವಜನಿಕರು ಸಹಕರಿಸಬೇಕು. ಪರಿಸರ ಉತ್ತಮವಾಗಿದ್ದರೆ ರೋಗಮುಕ್ತ ಜೀವನ ನಡೆಸಬಹುದಾಗಿದೆ ಎಂದರು.

ತಾಪಂ ಇಒ ದೇವರಾಜ ಹಿತ್ಲಕೊಪ್ಪ, ಪಿಡಿಒ ರಾಜೇಶ ನಾಯ್ಕ, ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ, ಉಪಾಧ್ಯಕ್ಷ ಶಾಂತಕುಮಾರ ಪಾಟೀಲ್, ಸದಸ್ಯರಾದ ಅಶೋಕ ನಾಯ್ಕ, ಸಿದ್ದಾರ್ಥ ಗೌಡರ್, ಅನಂತ ಹೆಗಡೆ, ಗೋಪಾಲಕೃಷ್ಣ ದೇವಾಡಿಗ. ಅಕ್ಷತಾ ಮಡಿವಾಳ, ಪ್ರೇಮಾ ಪಿ ನಾಯ್ಕ, ಸರೋಜಾ ನಾಯ್ಕ, ಹನುಮಕ್ಕ ಭೋವಿ, ವಸಂತ ನಾಯ್ಕ, ಎಸ್.ಆರ್.ಹೆಗಡೆ, ರವೀಂದ್ರ ಹೆಗಡೆ, ಶಶಿಧರ ಪಾಟೀಲ್, ಇತರರಿದ್ದರು.

ಶಾಲೆಗೆ ಭೇಟಿ

ಶಾಸಕರು ಹಾರ್ಸಿಕಟ್ಟಾ ಸಹಿಪ್ರಾ ಶಾಲೆಗೆ ಭೇಟಿ ನೀಡಿ ಬಿಸಿಯೂಟ, ಶಾಲಾ ಕಟ್ಟಡ ಹಾಗೂ ಜಾಗದ ಕುರಿತು ಮಾಹಿತಿ ಪಡೆದರು. ಶಾಲೆಗೆ ಒಂದು ಕೊಠಡಿ ಹಾಗೂ ಸಭಾಭವನದ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ಹೆಗಡೆ ಪ್ರಸ್ತಾಪಿಸಿದರು. ಒಂದು ಕೊಠಡಿ ಹಾಗೂ ಸಭಾಭವನ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net