ನೊಂದ ಕುಟುಂಬಕ್ಕೆ ನೆರವು ಶ್ರೇಷ್ಠ ಕಾರ್ಯ

sid (1)
Published on

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ

ನೊಂದ ಕುಟುಂಬಕ್ಕೆ ನೆರವು ನೀಡುವುದು ಶ್ರೇಷ್ಠ ಕಾರ್ಯ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಕಂಡ ಕನಸುಗಳನ್ನು ಮರಣ ಹೊಂದಿದ ನಂತರ ನನಸಾಗಿಸಲು ಶ್ರಮಿಸುವ ಒಡನಾಡಿಗಳ ಕಾರ್ಯ ಅಮೂಲ್ಯವಾದುದು. ಇಂತಹ ಕಾರ್ಯಕ್ಕೆ ಸವಾಜದಲ್ಲಿ ಗೌರವವಿದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ, ಆಸರೆ ಮನೆ ನಿರ್ವಾಣ ಸಮಿತಿಯ ಮುಂದಾಳು ವೈ.ವಿಜಯಕುವಾರ್ ಶೆಟ್ಟಿ ಗೋಳಿಯಂಗಡಿ ಹೇಳಿದರು.

ಗೋಳಿಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪ್ರಜ್ಞಾ ಯುವಕ ಮಂಡಲ, ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ದಾನಿಗಳ ಸಹಕಾರದಲ್ಲಿ ಆಸರೆ ಯೋಜನೆಯಡಿ, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಗೋಳಿಯಂಗಡಿ ಜನತಾ ಕಾಲೋನಿ ನಿವಾಸಿ ದಿ.ವಿಜಯ ನಾಯ್ಕ ಕುಟುಂಬಕ್ಕೆ ನಿರ್ಮಿಸಿದ ನೂತನ ಗೃಹ ‘ವಿಜಯಶ್ರೀ’ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಸರೆ ಮನೆ ನಿರ್ವಾಣ ಸಮಿತಿ ಪದಾಧಿಕಾರಿಗಳಾದ ಪ್ರವೀಣ್ ಲೋಬೋ ಗುಮ್ಮೋಲ, ಕಾಳು ನಾಯ್ಕ ಎಲ್ಸೆಮನೆ, ಉದಯ ಜನನಿ, ವ್ನಿೇಶ್ ನಾಯ್ಕ ಕಾರಿಕೊಡ್ಲು, ಚಂದ್ರ ನಾಯ್ಕ ಕಲ್ಲುಗುಂಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ವಸಂತಕುವಾರ್ ಶೆಟ್ಟಿ ಬೆಳ್ವೆ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುವಾರ ಪೂಜಾರಿ, ಉದ್ಯಮಿ ಹರೀಶ್ ಶೆಟ್ಟಿ ಗೋಳಿಯಂಗಡಿ, ಉದಯ ಜೋಗಿ, ರಮೇಶ್, ಸದಾಶಿವ ಆಚಾರ್ಯ, ಅನಂತಯ್ಯ ಆಚಾರ್ಯ, ನಾಗೇಂದ್ರ ಆಚಾರ್ಯ, ಜಿ.ಎಸ್.ಚಂದ್ರ ಆಚಾರ್ಯ, ಪತ್ರಕರ್ತ ಕೆ.ಸಂಜೀವ ಆರ್ಡಿ, ಗಣೇಶೋತ್ಸವ ಸಮಿತಿ, ಪ್ರಜ್ಞಾ ಯುವಕ ಮಂಡಲ, ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ನಾಗೇಶ್ ಭಟ್ ಯಳಂತೂರು, ಕಾರ್ತಿಕ್ ಭಟ್ ಯಳಂತೂರು ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಉದಯ ಆಚಾರ್ಯ ಸ್ವಾಗತಿಸಿದರು. ಪ್ರವೀಣ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net