ಸಂಕಷ್ಟಕ್ಕೆ ಮಿಡಿಯುವುದೇ ದೇಶ ಸೇವೆ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಪ್ರಾಯ

15 Nela Ph 01 Dwaja Vandane
Published on

ನೆಲಮಂಗಲ: ಕರೊನಾ ಪಿಡುಗು ಸೇರಿ ನಾನಾ ಬಗೆಯ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡುವುದು ದೇಶ ಸೇವೆಯ ಪ್ರತೀಕ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಹೇಳಿದರು.

ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಾಡಾಗಿದ್ದ ಸ್ವಾತಂತ್ರೊ್ಯೕತ್ಸವದಲ್ಲಿ ಎನ್​ಸಿಸಿ ವಿದ್ಯಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿ ಮಾತನಾಡಿದರು.

ಕರೊನಾ ಪಿಡುಗಿನ ನಿಮಿತ್ತ ಸರಳವಾಗಿ ಆದರೂ ದೇಶಭಕ್ತಿಯೊಂದಿಗೆ ಸ್ವಾತಂತ್ರೊ್ಯೕತ್ಸವ ಆಚರಿಸಲಾಗುತ್ತಿದೆ. ಗಡಿ ಕಾಯುವ ಯೋಧ, ಅನ್ನ ಒದಗಿಸುವ ರೈತ, ರಕ್ಷಣೆ ಒದಗಿಸುವ ಪೊಲೀಸರು, ಆರೋಗ್ಯ ಸೇವೆ ಒದಗಿಸುವ ವೈದ್ಯರು, ಶುಶ್ರೂಷಕರು ಸೇರಿ ಎಲ್ಲರನ್ನೂ ಸ್ಮರಿಸುವ ದಿನ ಇದಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಕೆ. ಮಂಜುನಾಥ್, ಸ್ವಾತಂತ್ರ್ಯವೆಂದರೆ ಜವಾಬ್ದಾರಿಯೇ ಹೊರತು ಸ್ವೇಚ್ಛಾಚಾರ ಅಲ್ಲ. ಸಮಾಜದ ಪ್ರತಿಯೊಬ್ಬರು ಜವಾಬ್ದಾರಿ ಅರಿತು ನಡೆದಾಗ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೋವಿಡ್ ಹಾಗೂ ನೆರೆಹಾವಳಿ ಸಂತ್ರಸ್ತರಿಗೆ ಸಹಾಯ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತ ಸನ್ಮಾನಿಸಿತು. ಜತೆಗೆ ಆರೋಗ್ಯ, ಪೊಲೀಸ್, ಕಂದಾಯ, ತೋಟಗಾರಿಕೆ ಇಲಾಖೆಗಳು, ಪೌರಕಾರ್ವಿುಕರು, ಪಿಡಿಒ ಗ್ರಾಮಸಹಾಯಕ ಸೇರಿ ಒಟ್ಟು 15 ಕೋವಿಡ್ ವಾರಿಯರ್ಸ್ ಅನ್ನು ಹಾಗೂ ವಿಜಯವಾಣಿ ದಾಬಸ್​ಪೇಟೆ ವರದಿಗಾರರ ಬರಗೇನಹಳ್ಳಿ ಚಿಕ್ಕರಾಜು ಅವರನ್ನು ಸನ್ಮಾನಿಸಲಾಯಿತು.

ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ಡಿವೈಎಸ್​ಪಿ ಎಚ್.ಪಿ. ಜಗದೀಶ್, ಸಿಪಿಐ ಹರೀಶ್, ತಾಪಂ ಇಒಗಳಾದ ಎನ್. ನರೇಂದ್ರಬಾಬು, ಮೋಹನ್​ಕುಮಾರ್, ಟಿಎಚ್​ಒ ಹರೀಶ್, ಪೌರಾಯುಕ್ತ ಮಂಜುನಾಥ್​ಸ್ವಾಮಿ, ಬಿಇಒ ಕೆ.ಸಿ. ರಮೇಶ್, ನಗರಸಭೆೆ ಸದಸ್ಯ ಗಂಗಾಧರ್ ರಾವ್, ಕಾರ್ಯನಿರತ ಪರ್ತಕರ್ತರ ಸಂಘದ ತಾಲೂಕು ಅಧ್ಯಕ್ಷ ಆರ್. ಪ್ರಮೋದ್​ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net