

ಹುಬ್ಬಳ್ಳಿ: ಬೆಂಗಳೂರಿನ ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಿ.ಎಸ್. ಶಿವಣ್ಣ (ಮಳವಳ್ಳಿ) ಅವರು ಇಲ್ಲಿಯ ಉಣಕಲ್ಲ ಗ್ರಾಮದ ಸಹನಾ ಮುಚ್ಚಂಡಿ ಅವರ ಶಿಕ್ಷಣಕ್ಕೆ ನೆರವು ನೀಡಿದ್ದಾರೆ.
ಸಹನಾಳಿಗೆ ಲ್ಯಾಪ್ಟಾಪ್ ನೀಡಿದ್ದಾರೆ. ಜತೆಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಸ್ತುಗಳನ್ನು ಒದಗಿಸುವ ಭರವಸೆ ನೀಡಿದರು.
ಸಾವಿರಾರು ಬಡ ವಿದ್ಯಾಥಿರ್ಗಳಿಗೆ ಧನ ಸಹಾಯ ಮಾಡುವ ಮೂಲಕ ಮೂರು ವರ್ಷದಲ್ಲಿ ಎರಡೂವರೇ ಸಾವಿರ ವಿದ್ಯಾಥಿರ್ಗಳಿಗೆ ಇವರು ಲ್ಯಾಪ್ಟಾಪ್ ನೀಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಈ ವಿದ್ಯಾರ್ಥಿನಿಗೆ ನೆರವು ನೀಡಿದರು.
ಸಹನಾ ಪೋಷಕರಾದ ಸುರೇಶ ಮುಚ್ಚಂಡಿ, ದಾನೇಶ್ವರಿ ಮುಚ್ಚಂಡಿ, ಮುತ್ತುರಾಜ ಅಡ್ಡಣಗಿ ಉಪಸ್ಥಿತರಿದ್ದರು.