

ಉಪ್ಪಿನಬೆಟಗೇರಿ: ನವಲಗುಂದ ತಾಲೂಕಿನ ಶಿರೂರು ಗ್ರಾಮದ ಬಳಿ ಇರುವ ಮಲಪ್ರಭಾ ಮುಖ್ಯ ಕಾಲುವೆಯಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ವಿದ್ಯಾರ್ಥಿ ರಾಜೇಶ ಚಂದ್ರಶೇಖರ ಮಡಿವಾಳರ ಕಾಲು ಜಾರಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನೆಗೆ ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ, ವೈಯಕ್ತಿಕವಾಗಿ 50 ಸಾವಿರ ರೂಪಾಯಿ ನಗದು ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಈರಣ್ಣ ಏಣಗಿ, ಭೀಮಶಿ ತಳವಾರ, ಶೆಟ್ಟೆಪ್ಪ ಅಮಟೂರ, ರಾಮಣ್ಣ ಉದಮೇಶಿ, ಮಹಾಂತೇಶ ಬಂಗಿ, ಈರಪ್ಪ ಉದಮೇಶಿ, ಮಾರುತಿ ಬೋವಿ, ಈರಪ್ಪ ಕನಾಜಿ, ಇತರರಿದ್ದರು.