ಹರಪನಹಳ್ಳಿ ಅಭಿವೃದ್ಧಿಗೆ ಸಹಕಾರಿ

ಹರಪನಹಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರು ಸಂಭ್ರಮಿಸಿದರು. ಪುರಸಭೆ ಅಧ್ಯಕ್ಷೆ ಫಾತೀಮಾಬೀ, ಉಪಾಧ್ಯಕ್ಷ ಕೊಟ್ರೇಶ್, ಮಾಜಿ ಅಧ್ಯಕ್ಷ ಹರಾಳು ಅಶೋಕ್, ಸದಸ್ಯರಾದ ಇಜಂತ್ಕರ್ ಮಂಜುನಾಥ, ಕಿರಣ್ ಶಾನಭಾಗ, ಜಾವೇದ್, ಜಾಕೀರ್, ರೊಕ್ಕಪ್ಪ, ಸುಮಾ ಜಗದೀಶ್ ಇತರರಿದ್ದರು.
ಹರಪನಹಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರು ಸಂಭ್ರಮಿಸಿದರು. ಪುರಸಭೆ ಅಧ್ಯಕ್ಷೆ ಫಾತೀಮಾಬೀ, ಉಪಾಧ್ಯಕ್ಷ ಕೊಟ್ರೇಶ್, ಮಾಜಿ ಅಧ್ಯಕ್ಷ ಹರಾಳು ಅಶೋಕ್, ಸದಸ್ಯರಾದ ಇಜಂತ್ಕರ್ ಮಂಜುನಾಥ, ಕಿರಣ್ ಶಾನಭಾಗ, ಜಾವೇದ್, ಜಾಕೀರ್, ರೊಕ್ಕಪ್ಪ, ಸುಮಾ ಜಗದೀಶ್ ಇತರರಿದ್ದರು.
Published on

ಹರಪನಹಳ್ಳಿ: ಪಟ್ಟಣದ ಪುರಸಭೆ ನಗರಸಭೆಯಾಗಿ ಮೆಲ್ದರ್ಜೆಗೇರಬೇಕೆಂಬ ಬಹುದಿನಗಳ ಕನಸು ನನಸಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಹೇಳಿದರು.

ಪುರಸಭೆ ಮುಂದೆ ಬುಧವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ಸಂಸದರ ಇಚ್ಛಾಶಕ್ತಿಯಿಂದ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇದರಿಂದಾಗಿ ಸರ್ಕಾರದಿಂದ ಮೂಲ ಸೌಕರ್ಯಗಳು ದೊರೆಯಲಿವೆ. ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ಹರಪನಹಳ್ಳಿ ಪುರಸಭೆಯ ಸರಹದ್ದನ್ನೇ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. 15ನೇ ಹಣಕಾಸು, ಎಸ್‌ಎಫ್‌ಸಿ ನಿಧಿ, ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ, ಸ್ವಚ್ಛ ಭಾರತ್ ಮಿಷನ್-2 ಹಾಗೂ ಕುಡಿಯುವ ನೀರಿನ ಯೋಜನೆಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯಲಿದೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಗರದ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ನೀರಿನ ತೆರಿಗೆ, ಘನತ್ಯಾಜ್ಯ ನಿರ್ವಹಣೆ ಶುಲ್ಕ ಹೆಚ್ಚಳವಾಗಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಣ ಸಂಗ್ರಹವಾಗಲಿದೆ. ಪುರಸಭೆಯಲ್ಲಿ 134 ಸಿಬ್ಬಂದಿ ಇದ್ದು, ನಗರಸಭೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಇನ್ನೂ 102 ಹುದ್ದೆಗಳು ನೇಮಕವಾಲಿವೆ ಎಂದರು.

ನಾಮನಿರ್ದೇಶಿತ ಸದಸ್ಯರಾದ ವಸಂತಪ್ಪ, ಗುಡಿ ನಾಗರಾಜ, ಸುಮಾ ಜಗದೀಶ್, ಪ್ರಮುಖರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಬಸವರಾಜ್ ಸಂಗಪ್ಪನವರ, ಇಸ್ಮಾಯಿಲ್ ಎಲಿಗಾರ, ಡಂಕಿ ವಾಸೀಮ್, ಶಶಿಕುಮಾರ್ ನಾಯ್ಕ, ಎನ್.ಶಂಕರ್, ಒ.ಮಹಾಂತೇಶ್, ವಾಗೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net