ನನ್ನ ಗಂಡನಿಗೆ ಸ್ವಲ್ಪ ಬುದ್ಧಿ ಹೇಳು ಬಾ ಅಣ್ಣ ಎಂದು ಕರೆದ ಮಹಿಳೆ; ಮನೆಗೆ ಬಂದು ಬಾಗಿಲು ಹಾಕಿದ ಗ್ರಾಪಂ ಸದಸ್ಯ ಮಾಡಿದ್ದೇನು ನೋಡಿ…!

IMG-20220805-WA0019
Published on

ಹಾವೇರಿ: ನನ್ನ ಪತಿ ಬಹಳ ಕಿರುಕುಳ ನೀಡುತ್ತಿದ್ದಾನೆ. ನೀವು ಬಂದು ಸ್ವಲ್ಪ ಬುದ್ಧಿ ಹೇಳಿ ಭಯ ಎಂದು ನೊಂದ ಮಹಿಳೆ ಗ್ರಾಪಂ ಸದಸ್ಯನಿಗೆ ಸಹಾಯ ಕೋರಿದರೆ, ಆತ ಮನೆಗೆ ಬಂದು ಆಕೆಯ ಪತಿಯನ್ನು ಹೊರಗೆ ಹಾಕಿ ಬಾಗಿಲು ಹಾಕಿದವನೇನನ್ನನ್ನು ಲವ್ ಮಾಡು, ಲೈಂಗಿಕ ಕ್ರಿಯೆಗೆ ಸಹಕರಿಸು. ನಾ ನಿನ್ನ ಚನ್ನಾಗಿ ನೋಡಿಕೊಳ್ಳುವೆ' ಎಂದು ಗಂಟು ಬಿದ್ದ ವಿಚಿತ್ರ ಘಟನೆ ಕುರಿತು ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಪಂ ಸದಸ್ಯ ಯೂನಿಸ್ ಅಹ್ಮದ ಕಲ್ಯಾಣ (೩೦) ಲೈಂಗಿಕ ಕಿರುಕುಳ ನೀಡಿದ ಆರೋಪಿ. ಪ್ರಕರಣದ ಕುರಿತು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಘಟನೆ…?
ಗ್ರಾಮದ ಮಹಿಳೆಯೊಬ್ಬಳು ತನ್ನ ಪತಿ ವಿಪರೀತ ಕಿರಿಕಿರಿ ಕೊಡುತ್ತಿರುವ ಕಾರಣ ಪತಿಯನ್ನು ಬಿಟ್ಟು ತವರು ಮನೆಗೆ ತೆರಳಿದ್ದರು. ಆದರೆ, ಗ್ರಾಮದ ಹಿರಿಯರು ರಾಜೀ ಪಂಚಾಯಿತಿ ಮಾಡಿ ಆಕೆಯನ್ನು ವಾಪಸ್ ಗಂಡನ ಮನೆಗೆ ಕಳುಹಿಸಿದ್ದರು. ಸ್ವಲ್ಪ ದಿನದ ನಂತರ ಪತಿ ಮತ್ತೇ ಅದೇ ಚಾಳಿ ಮಂದುವರಿಸಿದ್ದ.
ಇದರಿಂದ ಬೇಸತ್ತ ಮಹಿಳೆ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾಳೆ. ಆಕೆಯ ಚಿಕ್ಕಪ್ಪ ನಿನಗೆ ಒಂದು ನಂಬರ್ ಕೊಡುತ್ತೇನೆ. ಅವರಿಗೆ ಫೋನ್ ಮಾಡಿ ಹೇಳು. ಅವರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿ ಯೂನಿಸ್‌ನ ಮೊಬೈಲ್ ನಂಬರ್ ಕೊಟ್ಟಿದ್ದಾರೆ.
ಮಹಿಳೆ ಯೂನಿಸ್‌ಗೆ ಫೋನ್ ಮಾಡಿ ಅಣ್ಣ ಎಂದು ಕರೆದು ಸಮಸ್ಯೆ ಹೇಳಿಕೊಂಡಿದ್ದಾಳೆ. ಕೂಡಲೇ ಮಹಿಳೆ ಮನೆಗೆ ಬಂದ ಯೂನಿಸ್ ಆಕೆಯ ಗಂಡನನ್ನು ಮನೆಯಿಂದ ಹೊರಗೆ ಕಳುಹಿಸಿ ಬಾಗಿಲು ಹಾಕಿದ್ದಾನೆ. ನಂತರ ಮಹಿಳೆಗೆ `ನಾನೇ ನಿನ್ನ ಗಂಡ ಎಂದುಕೋ. ನಿನಗೆ ಏನು ಬೇಕೋ ಎಲ್ಲವನ್ನು ತಂದು ಕೊಡುತ್ತೇನೆ. ಆದರೆ, ನನ್ನನ್ನು ಪ್ರೀತಿಸು. ಲೈಂಗಿಕವಾಗಿ ಸಹಕರಿಸು' ಎಂದು ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಆಕೆಯ ಮೊಬೈಲ್ ನಂಬರ್‌ಗೆ ಅಶ್ಲೀಲ ಮೇಸೆಜ್‌ಗಳನ್ನು ಕಳುಹಿಸಿದ್ದಾನೆ.
ಈ ಎಲ್ಲ ವಿಚಾರವನ್ನು ನಾನು ಪೊಲೀಸರಿಗೆ ಹೇಳುತ್ತೇನೆ ಎಂದ ಬಳಿಕ ಮನೆಗೆ ಬಂದು ಮೊಬೈಲ್ ಕಸಿದುಕೊಂಡು ಮೇಸೆಜ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ನಿನ್ನ ಗಂಡನನ್ನು ಕೊಂದು ನಿನ್ನ ಮೇಲೆ ಹಾಕುವೆ ಎಂದು ಬೇದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಇತ್ತ ಆರೋಪಿ ಯೂನಿಸ್ ತಲೆಮರಿಸಿಕೊಂಡಿದ್ದಾನೆ. ಪೊಲೀಸರು ಆತನ ಪತ್ತೆಗೆ ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net