ರೈತರ ನೆರವಿಗಾಗಿ ಸರ್ಕಾರ ಮುಂದಾಗಲಿ

manavi patra
ರೈತರ ನೆರರವಿಗೆ ಸಕಾರ್ರ್ರ ಸ್ಪಂದಿಸಲಿ ಎಂದು ಮಸ್ಕಿ ತಾಲೂಕಿನ ರೈತರು ತಹಸಿಲ್ದಾರ ಕಚೇರಿಯ ಶಿರಸ್ತೆದಾರ ವಿಜಯಕುಮಾರ ಸಜ್ಜನ್‌ಗೆ ಮನವಿ ಪತ್ರ ಸಲ್ಲಿಸಿದರು. ಗವಿಸಿದ್ದಪ್ಪ ಸಾಹುಕಾರ ಹೆಸರೂರು, ಶಂಕ್ರಯ್ಯ ಗುರುವಿನಮಠ, ಮಾನಯ್ಯ ಅಂಕುಶದೊಡ್ಡಿ, ತಿಮ್ಮಣ್ಣ ವೆಂಕಟಾಪುರ, ಶಿವರಾಯಪ್ಪ, ಬಸವರಾಜಪ್ಪ, ಮುತ್ತಣ್ಣ, ವೀರೇಶ ತಲೇಖಾನ, ಸಂಗಯ್ಯ, ಚನ್ನಪ್ಪ, ಪರಶುರಾಮ, ಛತ್ರಪ, ಅಮರಗುಂಡಪ್ಪ, ಶರಣಪ್ಪ, ಚಂದಪ್ಪ, ದೇವಣ್ಣ ಇದ್ದರು.
Published on

ಮಸ್ಕಿ: ಮಸ್ಕಿ ತಾಲೂಕಿನ ಬಹುತೇಕ ಭಾಗಗಳಲ್ಲಿ ಒಣ ಖುಷ್ಕಿ ಭೂಮಿ ಇದ್ದು ಮಳೆ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಒಣಗಿ ಹೋಗಿದ್ದು ಬರಗಾಲವೆಂದು ಘೋಷಣೆ ಮಾಡಿ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಸಂತೆಕೆಲ್ಲೂರು ಭಾಗದ ರೈತರು ಒತ್ತಾಯ ಮಾಡಿದ್ದಾರೆ.

ಈ ಕುರಿತು ಮಂಗಳವಾರ ಕೃಷಿ ಸಚಿವ ಚಲುವರಾಯಸ್ವಾಮಿಗೆ ಬರೆದ ಮನವಿ ಪತ್ರವವನ್ನು ತಹಸಿಲ್ದಾರ ಕಚೇರಿಯ ಶಿರಸ್ತೆದಾರ ವಿಜಯಕುಮಾರ ಸಜ್ಜನ್‌ಗೆ ಸಲ್ಲಿಸಿದದರು.

ತಾ.ಪಂ. ಮಾಜಿ ಸದಸ್ಯ ಗವಿಸಿದ್ದಪ್ಪ ಸಾಹುಕಾರ ಹೆಸರೂರು ಮಾತನಾಡಿ, ಸರಿಯಾದ ಸಮಯಕಕ್ಕೆ ಮಳೆ ಬರದೆ ರೈತರು ಬಿತ್ತನೆ ಮಾಡಿದ ಬೆಳೆ ಒಣಗಿದೆ.

ರೈತರು ಒಣ ಬೇಸಾಯದಲ್ಲಿ ತೊಗರಿ, ಜೋಳ, ಸಜ್ಜೆ ಬಿತ್ತನೆ ಮಾಡಿದ್ದರು, ಆದರೆ ಈಗ ಬೆಳೆ ವಿಫಲವಾಗಿದ್ದು ಉಳಮೆ ಮಾಡಲು ಸಾವಿರಾರು ರೂಗಳನ್ನು ಬೀಜಕ್ಕೆ ವಿನಿಯೋಗಿಸಿದ್ದಾರೆ.

ಕೈಯಲ್ಲಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದು ರೈತರ ಜೀವನ ನಿರ್ವಹಣೆಗಾಗಿ ಸರ್ಕಾರ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದರು.
ಶಂಕ್ರಯ್ಯ ಗುರುವಿನಮಠ, ಮಾನಯ್ಯ ಅಂಕುಶದೊಡ್ಡಿ, ಚನ್ನಪ್ಪ, ಪರಶುರಾಮ, ಛತ್ರಪ, ಅಮರಗುಂಡಪ್ಪ, ಶರಣಪ್ಪ, ಚಂದಪ್ಪ, ದೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net