ಕಲಾದಗಿಯಲ್ಲಿ ಗ್ರಾಮ ಸಭೆ ಅಕ್ರಮ ತಡೆಗಟ್ಟಲು ಸಹಕರಿಸಿ

Help prevent illegal activities in Kaladagi Gram Sabha
Published on

ಕಲಾದಗಿ:ಅಬಕಾರಿ ಅಕ್ರಮಗಳು ಸಾಮಾಜಿಕ ಪಿಡುಗುಗಳಾಗಿದ್ದು, ಗ್ರಾಮಗಳಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹ ಇಲಾಖೆ ಜೊತೆ ಕೈಜೋಡಿಸಬೇಕು ಎಂದು ಅಬಕಾರಿ ಇನ್ಸ್​ಪೆಕ್ಟರ್​ ಮಂಜುನಾಥ ಮನವಿ ಮಾಡಿದರು.ಗ್ರಾಮದ ಹರಣಶಿಕಾರಿ ಕಾಲೋನಿಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಮದ್ಯ ಸೇವನೆಯಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾ ಇದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಿಗೆ ತಿಳಿಸಿದರು.

ಅಬಕಾರಿ ಇಲಾಖೆ ವತಿಯಿಂದ ನಿರಂತರ ಗ್ರಾಮ ಸಭೆಗಳನ್ನು ನಡೆಸುವುದರ ಮುಖಾಂತರ ಕಲಬೆರಕೆ ಸೇಂಧಿ, ಕಳ್ಳಬಟ್ಟಿ, ತಂಬಾಕು, ಗಾಂಜಾ ಮಾರಾಟ ಹಾಗೂ ಸೇವನೆ ಸೇರಿ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಜನರಿಗೆ ತಿಳಿವಳಿಕೆ ನೀಡುವುದು ಸೇರಿ ಅಕ್ರಮಗಳಲ್ಲಿ ತೊಡಗಿರುವವರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಯಂ ಉದ್ಯೋಗ ನೀಡುವ ಬಗ್ಗೆ ತಿಳಿ ಹೇಳಿದರು.ಮುಖಂಡರುಗಳಾದ ಶಿವಾಜಿ ಕಾಳೆ, ಶ್ಯಾಮ ಕಾಳೆ, ಮಂಜುನಾಥ ಕಾಳೆ, ಪ್ರಲ್ಹಾದ ಚವಾಣ, ಕುಮಾರ ಕಾಳೆ, ವಿಠ್ಠಲ ಚವ್ಹಾಣ, ರಾಚಪ್ಪ ಕಾಳೆ, ಉತ್ತಮ ಚವ್ಹಾಣ, ಮಾನಪ್ಪ ಚವ್ಹಾಣ, ಜುಗ್ನು ಕಾಳೆ ಉಪಸ್ಥಿತರಿದ್ದರು.

ಕಲಾದಗಿ ಹರಣಶಿಕಾರಿ ಕಾಲೋನಿಯಲ್ಲಿ ಅಬಕಾರಿ ಇಲಾಖೆ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಅಬಕಾರಿ ಅಧಿಕಾರಿ ಮಂಜುನಾಥ ಮಾತನಾಡಿದರು. ಮುಖಂಡರಾದ ಶಿವಾಜಿ ಕಾಳೆ, ಶ್ಯಾಮ ಕಾಳೆ, ಮಂಜುನಾಥ ಕಾಳೆ, ಪ್ರಲ್ಹಾದ ಚವಾಣ, ಕುಮಾರ ಕಾಳೆ, ವಿಠ್ಠಲ ಚವ್ಹಾಣ, ರಾಚಪ್ಪ ಕಾಳೆ, ಉತ್ತಮ ಚವ್ಹಾಣ, ಮಾನಪ್ಪ ಚವ್ಹಾಣ, ಜುಗ್ನು ಕಾಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net